Saturday, June 6, 2026
Homeಕೊಡಗುಕೊಡಗಿನಲ್ಲಿ‌ ರಾಸಾಯನಿಕ ದ್ರವ ಸೋರಿಕೆ ಪ್ರಕರಣ: ನಿಜಕ್ಕೂ ಅಲ್ಲಿ‌ ನಡೆದಿದ್ದೇನು?

ಕೊಡಗಿನಲ್ಲಿ‌ ರಾಸಾಯನಿಕ ದ್ರವ ಸೋರಿಕೆ ಪ್ರಕರಣ: ನಿಜಕ್ಕೂ ಅಲ್ಲಿ‌ ನಡೆದಿದ್ದೇನು?

- Advertisement -
- Advertisement -

ಕೊಡಗು; ಇಲ್ಲಿನ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಎಂಬಲ್ಲಿ  ರಾಸಾಯನಿಕ ದ್ರವ ಸೋರಿಕೆಯಾಗಿದೆ ಎಂದು ಸ್ಥಳೀಯರು ಆತಂಕಗೊಂಡಿದ್ದರು. ಆರು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಕೂಡ ಸೇರಿದ್ದರು.

ಇದೀಗ ನಿಜಾಂಶ ಬಯಲಾಗಿದೆ. ಲಾರಿಯಲ್ಲಿ ಸಾಗಿಸಿರುವುದು ಯಾವುದೇ ಕೆಮಿಕಲ್ ಅಥವಾ ಪಾಯಿಸನ್  ಅಲ್ಲ ಬದಲಾಗಿ ಬ್ಯಾಡಗಿ ಮೆಣಸಿನಕಾಯಿ ಸ್ವಾಸ್ ಅನ್ನೋದು ಗೊತ್ತಾಗಿದೆ.

ಸುಮಾರು ಒಂದು ಕೋಟಿಗೂ ಅಧಿಕ ಮೌಲ್ಯದ ಬ್ಯಾಡಗಿ ಮೆಣಸಿನಕಾಯಿಯ ಸ್ವಾಸ್ ನ್ನು‌ ಕುಶಾಲನಗರದಿಂದ ಕೇರಳಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಸೋರಿಕೆಯಾಗಿದೆ.
ಮೆಣಸಿನಕಾಯಿ ಸ್ವಾಸ್ ಸೋರಿದ್ದರಿಂದಾಗಿ ಕೆಮ್ಮು ಮತ್ತು ಕಣ್ಣು ಉರಿ ಕಾಣಿಸಿಕೊಂಡಿದೆ . ಆತಂಕಪಡುವ ಅಗತ್ಯವಿಲ್ಲವೆಂದು ಪೋಲಿಸರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!