Saturday, June 27, 2026
Homeಕರಾವಳಿಬೆಳ್ತಂಗಡಿ; ಐದು ತಿಂಗಳ ಹಿಂದೆ ವಿವಾಹವಾಗಿದ್ದ ನವ ವಿವಾಹಿತೆ ಆತ್ಮಹತ್ಯೆ

ಬೆಳ್ತಂಗಡಿ; ಐದು ತಿಂಗಳ ಹಿಂದೆ ವಿವಾಹವಾಗಿದ್ದ ನವ ವಿವಾಹಿತೆ ಆತ್ಮಹತ್ಯೆ

- Advertisement -
- Advertisement -

ಬೆಳ್ತಂಗಡಿ; ಐದು ತಿಂಗಳ ಹಿಂದೆ ವಿವಾಹವಾಗಿದ್ದ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿಯಲ್ಲಿ‌ ನಡೆದಿದೆ.‌ ಕೌಶಲ್ಯ(27) ಆತ್ಮಹತ್ಯೆ ಮಾಡಿಕೊಂಡ‌ ನವ ವಿವಾಹಿತೆ.

ಕೌಶಲ್ಯ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು.ಎರಡು ದಿನದ ಹಿಂದೆ ಕೃಷಿಗೆ ಬಳಸುವ ಕೀಟನಾಶಕ ಸೇವಿಸಿದ್ದರು. ಇಂದು ಚಿಕಿತ್ಸೆ ಫಲಿಸದೆ ಬೆಳಗ್ಗೆ ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕೌಶಲ್ಯ ಐದು ತಿಂಗಳ ಹಿಂದೆ  ಪಕ್ಕದ ಮನೆಯ ಸುರ್ಯಬೆಟ್ಟು ನಿವಾಸಿ ಸುಕೇಶ್(27) ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪತಿ ಸುಕೇಶ್ ಗೆ  ವಿವಾಹಿತೆಯೊಬ್ಬರ ಜೊತೆ ಸಂಬಂಧ ಇತ್ತು ಎನ್ನಲಾಗಿದೆ‌.

ವಾಟ್ಸಾಪ್ ನಲ್ಲಿ ಮೆಸೇಜ್ ಮಾಡುತ್ತಿದ್ದನ್ನು ತನ್ನ ಮೊಬೈಲ್ ಗೆ ಬರುವಂತೆ ಮಾಡಿದ್ದರು ಪತ್ನಿ ಕೌಶಲ್ಯ. ಇದೇ  ಮಹಿಳೆಗೆ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು.ಇದೇ ವಿಚಾರದಲ್ಲಿ ವಾಟ್ಸಾಪ್ ನಲ್ಲಿ ಸುಕೇಶ್  ನನಗೆ ಹುಟ್ಟಿದ ಮಗು ಅಲ್ವಾ ಎಂದು ಚಾಟ್ ಮಾಡಿದ್ದನ್ನು ಪತ್ನಿ ಕೌಶಲ್ಯ ನೋಡಿದ್ದರು. ಇದರಿಂದ ನೊಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!