Thursday, June 4, 2026
Homeಕರಾವಳಿಸುರತ್ಕಲ್:‌ ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್ ಪಲ್ಟಿ:‌ ಅಪಘಾತದಲ್ಲಿ ಬಾಲಕ ಮೃತ್ಯು

ಸುರತ್ಕಲ್:‌ ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್ ಪಲ್ಟಿ:‌ ಅಪಘಾತದಲ್ಲಿ ಬಾಲಕ ಮೃತ್ಯು

- Advertisement -
- Advertisement -

ಸುರತ್ಕಲ್:‌ ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ರಸ್ತೆಯಲ್ಲಿ ಉರುಳಿಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಸೂರಿಂಜೆಯ ಕೋಟೆ ಎಂಬಲ್ಲಿ ಸಂಭವಿಸಿದೆ.

ಸೂರಿಂಜೆ ಕೋಟೆ ನಿವಾಸಿ ಮುಹಮ್ಮದ್‌ ಮುಸ್ಲಿಯಾರ್‌ ಎಂಬುವವರ ಪುತ್ರ ಮುಹಮ್ಮದ್‌ ಸೈಫ್‌(೧೩) ಮೃತಪಟ್ಟ ಬಾಲಕ.

ಈತ ಐಸ್‌ಕ್ರೀಂ ತಿನ್ನಲು ಸ್ನೇಹಿತರೊಂದಿಗೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಿಂಬದಿಯಲ್ಲಿ ಕುಳಿತಿದ್ದ ಸೈಫ್‌ ಸ್ಕೂಟರ್‌ ಉರುಳಿಬಿದ್ದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!