Monday, May 6, 2024
Homeಕರಾವಳಿಮರೋಡಿ: 9ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ: ನೆಲದ ಸಂಸ್ಕೃತಿ ಮಕ್ಕಳಿಗೆ ತಿಳಿಸಿ: ಕೇಶವ...

ಮರೋಡಿ: 9ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ: ನೆಲದ ಸಂಸ್ಕೃತಿ ಮಕ್ಕಳಿಗೆ ತಿಳಿಸಿ: ಕೇಶವ ಬಂಗೇರ

spot_img
- Advertisement -
- Advertisement -

ಬೆಳ್ತಂಗಡಿ: ನಮ್ಮ ಮಣ್ಣಿನ ಸನಾತನ ಸಂಸ್ಕೃತಿಯು ಅತ್ಯಂತ ಪವಿತ್ರವಾದುದು. ಅದನ್ನು ಉಳಿಸುವ ಜೊತೆಗೆ ಮುಂದಿನ ಪೀಳಿಗೆಗೆ ದಾಟಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಂಗಳೂರಿನ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಹೇಳಿದರು.

ತಾಲ್ಲೂಕಿನ ಮರೋಡಿ ಶ್ರೀ ಉಮಾಮಹೇಶ್ವರ ಯಗ್‌ ಸ್ಟಾರ್ ಫ್ರೆಂಡ್ಸ್ ಇದರ ವತಿಯಿಂದ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶನಿವಾರ ಆಯೋಜಿಸಿದ್ದ 9ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.

ಭಾರತದ ಸಂಸ್ಕೃತಿಯ ಮೇಲೆ ಪರಕೀಯ ಸಂಸ್ಕೃತಿಗಳು ನಿರಂತರವಾಗಿ ದಾಳಿ ನಡೆಸಿದರೂ ನಮ್ಮ ನೆಲದ ಸಂಸ್ಕೃತಿ ಇನ್ನೂ ಶ್ರೀಮಂತವಾಗಿದೆ. ಇದನ್ನು ನಮ್ಮ ಮಕ್ಕಳಿಗೆ ತಿಳಿಸುವ ಮೂಲಕ ಧರ್ಮ ಕಟ್ಟುವ, ಸಮಾಜ ಕಟ್ಟುವ ಕೆಲಸದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಯುವಸಂಪತ್ತು ನಮ್ಮ ದೇಶದ ದೊಡ್ಡ ಆಸ್ತಿ. ಯುವ ಸಮುದಾಯವು ಸಮಾಜ ಕಟ್ಟುವ ಕೆಲಸದಲ್ಲಿ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಮರೋಡಿಯ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಸಂಘಟನೆ ಮಾದರಿಯಾಗಿದೆ ಎಂದು ಹೇಳಿದರು.

ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ ಇದರ ಗೌರವಾಧ್ಯಕ್ಷ ಯಶೋಧರ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ವಿಜಯ ಆರಿಗ, ಶಿರ್ತಾಡಿ ಪ್ರಭಾ ಕ್ಲಿನಿಕ್‌ನ ಡಾ.ಆಶೀರ್ವಾದ್‌, ಪ್ರಗತಿಪರ ಕೃಷಿಕ ರವೀಂದ್ರ ಹೆಗ್ಡೆ ಉಚ್ಚೂರು, ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ ಇದರ ಅಧ್ಯಕ್ಷ ರಾಘವ ಪೂಜಾರಿ, ಯುವ ಉದ್ಯಮಿ ದಿನೇಶ್‌ ಬುಣ್ಣಾನ್ ಇಸ್ರೇಲ್‌ ಮುಖ್ಯ ಅತಿಥಿಯಾಗಿದ್ದರು.

ಕಂಬಳ ಕ್ಷೇತ್ರದ ಸಾಧಕ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪ್ರದೀಶ್ ಮರೋಡಿ, ಕರ್ನಾಟಕ ಕೀಡಾರತ್ನ ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರ ಶ್ರೀಧರ ಮರೋಡಿ, ಅಕ್ಷರ ಸಿರಿ ಪ್ರಶಸ್ತಿ ಪುರಸ್ಕೃತ ಬಂದಾರು ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಗಣೇಶ್ ಬಿ.  ಕಾರ್ಯಕ್ರಮ ನಿರೂಪಿಸಿದರು. ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ನ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.

ಸುಬ್ರಹ್ಮಣ್ಯ ಪ್ರಸಾದ್ ಅವರ ಪೌರೋಹಿತ್ಯದಲ್ಲಿ ಕಲಶ ಪ್ರತಿಷ್ಠೆ, ಶ್ರೀ ಶನೈಶ್ವರ ಪೂಜೆ, ಉಮಾಮಹೇಶ್ವರ ದೇವರಿಗೆ ರಂಗಪೂಜೆ ನಡೆಯಿತು.

ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಉಮೇಶ್‌ ಮಿಜಾರ್‌ ಸಾರಥ್ಯದ ನಮ್ಮ ಕಲಾವಿದೆರ್‌ ಬೆದ್ರ ಇವರಿಂದ ‘ಕುಸಲ್ದ ಗೊಬ್ಬು’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

ಚಿತ್ರ: ಗಣೇಶ್ ಹೆಗ್ಡೆ, ನಾರಾವಿ

- Advertisement -
spot_img

Latest News

error: Content is protected !!