Friday, June 5, 2026
Homeಕರಾವಳಿಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ‌ ಸಮಾವೇಶ ಹಿನ್ನೆಲೆ: ಸಮಾವೇಶ ನಡೆಯಲಿರುವ ಜಾಗ ಪರಿಶೀಲಿಸಿದ ‌ನಳೀನ್ ಕುಮಾರ್...

ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ‌ ಸಮಾವೇಶ ಹಿನ್ನೆಲೆ: ಸಮಾವೇಶ ನಡೆಯಲಿರುವ ಜಾಗ ಪರಿಶೀಲಿಸಿದ ‌ನಳೀನ್ ಕುಮಾರ್ ಕಟೀಲ್

- Advertisement -
- Advertisement -

ಮಂಗಳೂರು: ಸೆಪ್ಟೆಂಬರ್ 2ರಂದು ಮಂಗಳೂರಿಗೆ ಪ್ರಧಾನಿ‌ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಆ  ಜಾಗವನ್ನು ನಳೀನ್ ಕುಮಾರ್ ಕಟೀಲ್‌ ಪರಿಶೀಲನೆ ನಡೆಸಿದ್ರು.

ನಳಿನ್ ಕುಮಾರ್ ಗೆ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಸಾಥ್ ನೀಡಿದ್ರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕಮಿಷನರ್ ಶಶಿಕುಮಾರ್ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪೆಂಡಾಲ್ ಹಾಕುವ ಜಾಗ, ಪಾರ್ಕಿಂಗ್ ಹಾಗೂ ತುರ್ತು ಹೆಲಿಪ್ಯಾಡ್ ನಿರ್ಮಾಣ ಸಂಬಂಧ ಪರಿಶೀಲನೆ ನಡೆಸಿದ್ದಾರೆ. 

ನವಮಂಗಳೂರು ಬಂದರಿನ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸಕ್ಕೆ  ನರೇಂದ್ರ ‌ಮೋದಿ‌ ಆಗಮಿಸಲಿದ್ದಾರೆ.ಅಧಿಕೃತ ಕಾರ್ಯಕ್ರಮದ ಜೊತೆ ಫಲಾನುಭವಿಗಳ ಸಮಾವೇಶದ ಹೆಸರಲ್ಲಿ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.  ಕೊಚ್ಚಿಯ ಕಾರ್ಯಕ್ರಮ ‌ಮುಗಿಸಿ 3.45ಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ‌ 5 ಗಂಟೆಗೆ ಸಮಾವೇಶ ನಡೆಸಲು ಬಿಜೆಪಿ ಪ್ಲ್ಯಾನ್ ಮಾಡಿದೆ.

- Advertisement -

Latest News

error: Content is protected !!