Saturday, May 18, 2024
Homeಮನರಂಜನೆಹೋಮ್ ಕ್ವಾರೆಂಟಿನ್ ನಲ್ಲಿರುವಾಗಲೇ ನಟನಿಗೆ ಡೈವೋರ್ಸ್ ನೋಟಿಸ್ ನೀಡಿದ ಪತ್ನಿ

ಹೋಮ್ ಕ್ವಾರೆಂಟಿನ್ ನಲ್ಲಿರುವಾಗಲೇ ನಟನಿಗೆ ಡೈವೋರ್ಸ್ ನೋಟಿಸ್ ನೀಡಿದ ಪತ್ನಿ

spot_img
- Advertisement -
- Advertisement -

ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಗೆ ಕ್ವಾರಂಟೈನ್ ನಡುವೆಯೇ ಪತ್ನಿ ಆಲಿಯಾ ವಿಚ್ಛೇದನ ಕೋರಿ ನೋಟಿಸ್ ಕಳುಹಿಸಿದ್ದಾರೆ. ಪತ್ನಿ ಆಲಿಯಾ ಸಿದ್ದಿಕಿ 11 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ. 

ಕೊರೋನಾ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಜಾರಿ ಮಾಡಲಾಗಿದೆ. ಈ ಕಾರಣದಿಂದ ಮೇ 7 ರಂದು ವಾಟ್ಸಾಪ್ ಮತ್ತು ಇಮೇಲ್ ಮೂಲಕ ವಿಚ್ಛೇದನ ಕೋರಿ ನೋಟಿಸ್ ಕಳುಹಿಸಿದ್ದಾರೆ. ಆದರೆ, ನವಾಜುದ್ದೀನ್ ಸಿದ್ದಿಖಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದೆ.

ಮೊದಲು ಶೀಬಾ ಅವರನ್ನು ಮದುವೆಯಾಗಿದ್ದ ನವಾಜುದ್ದೀನ್ ಸಿದ್ಧಿಖಿ 2009ರಲ್ಲಿ ಆಲಿಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಮತ್ತು ಆಲಿಯಾ 2009ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.  ಪ್ರಸ್ತುತ ಉತ್ತರಪ್ರದೇಶದ ಬುಢಾನಾದಲ್ಲಿ ತಾಯಿಯನ್ನು ನೋಡಲು ಹೋಗಿದ್ದ ನವಾಜುದ್ದೀನ್ ಸಿದ್ದಿಖಿ 14 ದಿನಗಳ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಆಲಿಯಾ, ನಾನು ಅವರಿಗೆ ವಿಚ್ಛೇದನಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದೇನೆ. ಆದರೆ ಅವರಿಂದ ನನಗೆ ಯಾವುದೇ ಉತ್ತರ ಇನ್ನೂ ಬಂದಿಲ್ಲ ಎಂದು ತಿಳಿಸಿದ್ದಾರೆ.

ವಿಚ್ಛೇದನಕ್ಕೆ ಕಾರಣದ ಬಗ್ಗೆ ಕೇಳಿದಾಗ ನಾನು ಈಗ ಏನು ಹೇಳಲು ಸಾಧ್ಯವಿಲ್ಲ. ಆದರೆ ಕಳೆದ ಹತ್ತು ವರ್ಷಗಳಿಂದ ನಮ್ಮ ಮಧ್ಯೆ ಸಮಸ್ಯೆಗಳಿವೆ. ಈ ಲಾಕ್‍ಡೌನ್ ಸಂದರ್ಭದಲ್ಲಿ ನಾನು ನಮ್ಮ ದಾಂಪತ್ಯ ಜೀವನವನ್ನು ಕೊನೆಯಾಗಿಸಬೇಕು ಎಂದು ಯೋಚಿಸುತ್ತಿದ್ದೆ. ಅವರು ಮುಜಫ್ಫರ್ ಪುರಕ್ಕೆ ತೆರಳುವ ಮೊದಲೇ ನೋಟಿಸ್ ಕಳುಹಿಸಿದ್ದೇನೆ. ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದ್ದರಿಂದ ನಾನು ಈಗ ಕಾನೂನು ಮಾರ್ಗದ ಮೂಲಕ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!