Sunday, June 7, 2026
Homeಇತರಪಾಕಿಸ್ತಾನ: ಒಂದೇ ದಿನ 1841 ಮಂದಿಗೆ ಕೊರೋನಾ ಪಾಸಿಟಿವ್, 36 ಸಾವು

ಪಾಕಿಸ್ತಾನ: ಒಂದೇ ದಿನ 1841 ಮಂದಿಗೆ ಕೊರೋನಾ ಪಾಸಿಟಿವ್, 36 ಸಾವು

- Advertisement -
- Advertisement -

ಇಸ್ಲಾಮಾಬಾದ್: ಕೊರೊನಾ ವೈರಸ್ ನ ಅಟ್ಟಹಾಸ ಪಾಕಿಸ್ತಾನದಲ್ಲೂ ನಡೆಸುತ್ತಿದ್ದು, ಇಂದು ಒಂದೇ ದಿನ 1841 ಪ್ರಕರಣಗಳು ದಾಖಲಾಗಿ, 36 ಮಂದಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಪ್ರಸ್ತುತ ಪಾಕಿಸ್ತಾನದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 44,000 ದಾಟಿದ್ದು, 939 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಈವರೆಗೆ ಒಟ್ಟು 12,489 ರೋಗಿಗಳು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ

ಲಾಕ್‌ಡೌನ್‌ ಕಾರಣದಿಂದ ಧಾರ್ಮಿಕ ಸಭೆಗಳು, ಪ್ರಾರ್ಥನೆಗೆ ನಿರ್ಬಂಧ ಹೇರಲಾಗಿತ್ತು. ಇದೀಗ, ರಂಜಾನ್ ಹಬ್ಬದ ಹಿನ್ನೆಲೆ ಪಾಕಿಸ್ತಾನದಲ್ಲಿ ಪ್ರಾರ್ಥನೆ ಮಾಡಲು ಷರತ್ತು ವಿಧಿಸಿ ಅವಕಾಶ ಮಾಡಿಕೊಡಲಾಗಿದೆ. ಪ್ರಾರ್ಥನಾ ಸಮಯದಲ್ಲಿ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಸರ್ಕಾರ ಸೂಚಿಸಿದೆ.

- Advertisement -

Latest News

error: Content is protected !!