Monday, June 8, 2026
Homeಕರಾವಳಿಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನ ಹತ್ಯೆ ಪ್ರಕರಣ;ಕೊಲೆಯಾದ ಗೋವಿಂದರಾಜು ಮೃತ ದೇಹ ಚಾರ್ಮಾಡಿ ಘಾಟಿಯಲ್ಲಿ ಪತ್ತೆ

ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನ ಹತ್ಯೆ ಪ್ರಕರಣ;ಕೊಲೆಯಾದ ಗೋವಿಂದರಾಜು ಮೃತ ದೇಹ ಚಾರ್ಮಾಡಿ ಘಾಟಿಯಲ್ಲಿ ಪತ್ತೆ

- Advertisement -
- Advertisement -

ಚಾರ್ಮಾಡಿ; ಬೆಂಗಳೂರಿನಲ್ಲಿ ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನ ಹತ್ಯೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ.ಕೊಲೆಯಾದ ಗೋವಿಂದರಾಜು ಮೃತ ದೇಹ ಚಾರ್ಮಾಡಿ ಘಾಟಿಯಲ್ಲಿ ಪತ್ತೆಯಾಗಿದೆ.

ಬೆಂಗಳೂರಿನ ಮತ್ತಿಕೆರೆ ನಿವಾಸಿ ಗೋವಿಂದರಾಜುನನ್ನು ಯುವತಿಗೆ ಮೆಸೇಜ್ ಮಾಡಿದ್ದಕ್ಕಾಗಿ ಕೊಲೆ ಮಾಡಲಾಗಿತ್ತು.ಈ ಬಗ್ಗೆ ತನಿಖೆ ನಡೆಸಿದ ಯಶವಂತಪುರ ಪೊಲೀಸರಿಗೆ ಆರೋಪಿಗಳು ಕೊಲೆ ಮಾಡಿ ಮೃತದೇಹವನ್ನು ಚಾರ್ಮಾಡಿ ಘಾಟಿಯಲ್ಲಿ ಎಸೆದಿದ್ದಾರೆ ಅನ್ನೋ ಮಾಹಿತಿ ಸಿಕ್ಕಿತ್ತು. ಅದರಂತೆ ಗೋವಿಂದರಾಜು ಮೃತದೇಹಕ್ಕಾಗಿ ನಾಲ್ವರು ಆರೋಪಿಗಳನ್ನ ಚಾರ್ಮಾಡಿ ಘಾಟ್ಗೆ  ತಂದು ಚಾರ್ಮಾಡಿ ಘಾಟಿಯಲ್ಲಿ ಹುಡುಕಾಟ ಯಶವಂತಪುರ ಪೊಲೀಸರು ನಡೆಸಿದ್ದರು.

ಇದೀಗ ಗೋವಿಂದರಾಜು ಮೃತ ದೇಹ ಚಾರ್ಮಾಡಿ ಘಾಟಿಯಲ್ಲಿ ಪತ್ತೆಯಾಗಿದೆ.ಕೊಲೆ ಮಾಡಿ ಚಾರ್ಮಾಡಿ ಘಾಟಿಯ ಪ್ರಪಾತಕ್ಕೆ ಎಸೆದಿದ್ದರು ಆರೋಪಿಗಳು .

ಕೊಲೆಯಾದ ಗೋವಿಂದ ರಾಜು

- Advertisement -

Latest News

error: Content is protected !!