Monday, June 8, 2026
Homeಕರಾವಳಿಪುತ್ತೂರು ಕಂಬಳದಲ್ಲಿ ಯುವತಿಯರ ಫೋಟೋ ತೆಗೆಯುತ್ತಿದ್ದಾತನನ್ನು ವಶಕ್ಕೆ ಪಡೆದ ಪೊಲೀಸರು

ಪುತ್ತೂರು ಕಂಬಳದಲ್ಲಿ ಯುವತಿಯರ ಫೋಟೋ ತೆಗೆಯುತ್ತಿದ್ದಾತನನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಪುತ್ತೂರು ಕಂಬಳದಲ್ಲಿ ಯುವತಿಯರ ಫೋಟೋ ತೆಗೆಯುತ್ತಿದ್ದಾತನನ್ನು ಹಿಂದೂ ಕಾರ್ಯಕರ್ತರು ಹಿಡಿದು ಪೊಲೀಸರಿಗ ಒಪ್ಪಿಸಿದ ಘಟನೆ ನಡೆದಿದೆ.

ಮೊನ್ನೆ ನಡೆದ ಕಂಬಳದಲ್ಲಿ ಯುವಕನೊಬ್ಬ ಯುವತಿಯರ ಫೋಟೋ ತೆಗೆಯುತ್ತಿದ್ದ. ಇದನ್ನು ಗಮನಿಸಿದ ಯುವತಿಯೊಬ್ಬಳು ಈ ವಿಚಾರವನ್ನು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ತಿಳಿಸಿದ್ದಾಳೆ. ಅವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಮೊಬೈಲ್ ನಲ್ಲಿ ಅನೇಕ ಯುವತಿಯರ ಫೋಟೋಗಳು ಇದ್ದವು ಅನ್ನೋದು ಗೊತ್ತಾಗಿದೆ. ಇನ್ನು ಯುವಕ ಪುತ್ತೂರಿನ ಕುರಿಯದವನು ಅನ್ನೋ ಮಾಹಿತಿ ಲಭ್ಯವಾಗಿದೆ.ಇನ್ನು ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!