Thursday, April 25, 2024
Homeತಾಜಾ ಸುದ್ದಿಮುಂಬೈ ಜನತೆಯ ಗಮನಕ್ಕೆ: ಫೆ.1 ರಿಂದ ಸಾರ್ವಜನಿಕರಿಗೆ ಲೋಕಲ್ ಟ್ರೈನ್ ಸೇವೆ ಪುನಾರಂಭ

ಮುಂಬೈ ಜನತೆಯ ಗಮನಕ್ಕೆ: ಫೆ.1 ರಿಂದ ಸಾರ್ವಜನಿಕರಿಗೆ ಲೋಕಲ್ ಟ್ರೈನ್ ಸೇವೆ ಪುನಾರಂಭ

spot_img
- Advertisement -
- Advertisement -

ಮುಂಬೈ: ಕೊರೊನಾ ಸೋಂಕು ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ರದ್ದುಗೊಂಡಿದ್ದ ಮುಂಬೈ ಸ್ಥಳೀಯ ರೈಲುಗಳ ಸಂಚಾರ ಫೆಬ್ರವರಿ 1 ರಿಂದ ಪುನರಾರಂಭಗೊಳ್ಳಲಿದೆ.

ಮಹಾರಾಷ್ಟ್ರ ಸರ್ಕಾರ ಹೊರಿಡಿಸಿರುವ ಆದೇಶದ ಪ್ರಕಾರ, ಸಾರ್ವಜನಿಕರಿಗೆ ಸ್ಥಳೀಯ ರೈಲು ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 9ರವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ. ಈ ಸಮಯದ ನಡುವೆ, ಅಗತ್ಯ ಸೇವೆಗಳಲ್ಲಿರುವ ಕಾರ್ಮಿಕರು ಮತ್ತು ಆರೋಗ್ಯ ಸಿಬ್ಬಂದಿ, ಒಂಟಿ ಮಹಿಳಾ ಪ್ರಯಾಣಿಕರು ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಪಾಸ್ ಪಡೆದವರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ.

ಕೋವಿಡ್-19 ಮಾರ್ಗಸೂಚಿ ಪಾಲನೆ, ಅಂತರ ಕಾಯ್ದುಕೊಳ್ಳುವಿಕೆ ನಿಯಮಗಳನ್ನು ಪಾಲಿಸಲಾಗುವುದು ಎಂದೂ ಅವರು ಹೇಳಿದ್ದಾರೆ. ಜನದಟ್ಟಣೆಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಸದ್ಯ ರೈಲುಗಳ ಸಂಚಾರಕ್ಕೆ ಸಮಯ ನಿಗದಿಪಡಿಸಲಾಗಿದೆ. ದಟ್ಟಣೆಯ ಸಮಯ ಹೊರತುಪಡಿಸಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!