Saturday, May 4, 2024
Homeತಾಜಾ ಸುದ್ದಿಖಾಸಗಿ ಶಾಲೆಗಳ ಫೀಸ್ ಕಡಿತ ಮಾಡಿದ ರಾಜ್ಯ ಸರ್ಕಾರ: ಶಾಲೆಗಳು ಡೊನೇಷನ್, ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ

ಖಾಸಗಿ ಶಾಲೆಗಳ ಫೀಸ್ ಕಡಿತ ಮಾಡಿದ ರಾಜ್ಯ ಸರ್ಕಾರ: ಶಾಲೆಗಳು ಡೊನೇಷನ್, ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ

spot_img
- Advertisement -
- Advertisement -

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಈ ಸಲ ಖಾಸಗಿ ಶಾಲೆಯ ಶುಲ್ಕ ಅಥವಾ ಫೀಸ್ ಅನ್ನು ರಾಜ್ಯ ಸರ್ಕಾರ ಕಡಿತ ಮಾಡಿದೆ. 2020-21ನೇ ಸಾಲಿಗೆ ಸೀಮಿತಗೊಂಡಂತೆ ರಾಜ್ಯದಲ್ಲಿ ಯಾವುದೇ ಪಠ್ಯಕ್ರಮವನ್ನ ಭೋದಿಸುವ ಶಾಲೆಗಳು ಕಳೆದ ಸಲ (2019-20) ತೆಗೆದುಕೊಂಡಿದ್ದ ಭೋದನಾ ಶುಲ್ಕ ಅಥವಾ ಟೂಷನ್ ಫೀಸ್​ನ ಶೇ. 70ರಷ್ಟು ಮಾತ್ರ ಒಟ್ಟು ಶುಲ್ಕವಾಗಿ ತೆಗೆದುಕೊಳ್ಳಬೇಕು ಅಂತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್​ ಹೇಳಿದ್ದಾರೆ.

ಇದನ್ನು 2 ಅಥವಾ 3 ಕಂತುಗಳಲ್ಲಿ ಕಟ್ಟಲು ಅವಕಾಶವನ್ನ ಕೂಡ ಕೊಡಬೇಕು. ಈ ಶುಲ್ಕವನ್ನ ಹೊರತುಪಡಿಸಿ ಡೊನೇಷನ್ ಆಗಲೀ ಅಥವಾ ಅಭಿವೃದ್ಧಿ ಶುಲ್ಕ ಆಗಲೀ ಸೇರಿದಂತೆ ಬೇರೆ ಯಾವುದೇ ಶುಲ್ಕ ತೆಗೆದುಕೊಳ್ಳುವಂತಿಲ್ಲ. ಯಾವುದಾದ್ರೂ ಶಾಲೆ ಇದಕ್ಕಿಂತಲೂ ಕಮ್ಮಿ ಫೀಸ್​ ತೆಗೆದುಕೊಳ್ತೀವಿ ಅಂದ್ರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ. ಕೆಲವೊಂದು ಶಿಕ್ಷಣ ಸಂಸ್ಥೆಗಳು ಶೇ. 40ರಷ್ಟು ಫೀಸ್ ಕಲೆಕ್ಟ್ ಮಾಡ್ತಿವೆ. ಅದು ಒಳ್ಳೆಯ ವಿಚಾರ. ಇನ್ನೂ ಕೆಲ ಶಾಲೆಗಳು ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಆಗ್ಬಾರ್ದು ಅಂತ ಹೇಳಿದ್ರು.

 ಆದ್ರೆ ಎಲ್ಲಾ ಶಾಲೆಗಳು ಅನ್ವಯವಾಗುವಂತೆ ಒಂದು ನಿಯಮ ತರಬೇಕು ಅಂತ ನಾವು ಈ ನಿರ್ಧಾರ ತೆಗೆದುಕೊಂಡಿದ್ದೀವಿ. ಒಂದ್ವೇಳೆ ಸ್ಕೂಲ್ ಫೀಸ್ ಬಗ್ಗೆ ಶಾಲೆ ಮತ್ತು ಪೋಷಕರ ಮಧ್ಯೆ ಏನಾದ್ರೂ ತಕರಾರು ಬಂದ್ರೆ ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಬಗೆಹರಿಸಲಾಗುವುದು ಅಂತ ಹೇಳಿದ್ದಾರೆ.

- Advertisement -
spot_img

Latest News

error: Content is protected !!