Sunday, May 5, 2024
Homeತಾಜಾ ಸುದ್ದಿ60 ವರ್ಷಗಳಿಂದ ಗುಹೆಯಲ್ಲೇ ವಾಸವಿರುವ ಸ್ವಾಮೀಜಿಯಿಂದ ರಾಮ ಮಂದಿರ ನಿರ್ಮಾಣಕ್ಕೆ 1ಕೋಟಿ ರೂ. ದೇಣಿಗೆ

60 ವರ್ಷಗಳಿಂದ ಗುಹೆಯಲ್ಲೇ ವಾಸವಿರುವ ಸ್ವಾಮೀಜಿಯಿಂದ ರಾಮ ಮಂದಿರ ನಿರ್ಮಾಣಕ್ಕೆ 1ಕೋಟಿ ರೂ. ದೇಣಿಗೆ

spot_img
- Advertisement -
- Advertisement -

ಹರಿದ್ವಾರ: 60 ವರ್ಷಗಳಿಂದ ಗುಹೆಯಲ್ಲಿ ವಾಸವಾಗಿರುವ 83 ವರ್ಷದ ಸ್ವಾಮಿ ಶಂಕರ್ ದಾಸ್ ಅವರು ರಾಮ ಮಂದಿರ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ರಿಷಿಕೇಶದ ಗುಹೆಯಲ್ಲಿ ವಾಸವಾಗಿರುವ ಶಂಕರ ದಾಸ್ ರನ್ನು ಸ್ಥಳೀಯರು ಫಕ್ಕಡ್ ಬಾಬಾ ಎಂದು ಕರೆಯುತ್ತಾರೆ. ಗುರುವಾರ ಸ್ಟೇಟ್ ಬ್ಯಾಂಕ್ ಗೆ ತೆರಳಿದ ಶಂಕರ್ ದಾಸ್ 1 ಕೋಟಿ ರೂಪಾಯಿ ಚೆಕ್ ನೀಡಿದ್ದಾರೆ. ಚೆಕ್ ನೋಡಿದ ಬ್ಯಾಂಕ್ ಸಿಬ್ಬಂದಿ ದಂಗಾಗಿದ್ದಾರೆ. ಆದ್ರೆ ಖಾತೆ ಚೆಕ್ ಮಾಡಿದಾಗ ಶಂಕರ್ ದಾಸ್ ಖಾತೆಯಲ್ಲಿ ಹಣವಿರುವುದು ಗೊತ್ತಾಗಿದೆ. ನಂತರ ಬ್ಯಾಂಕ್ ಸಿಬ್ಬಂದಿ ಸ್ಥಳೀಯ ಆರ್ ಎಸ್ ಎಸ್ ಕಾರ್ಯಕರ್ತರನ್ನು ಬ್ಯಾಂಕ್ ಗೆ ಕರೆಸಿ ಚೆಕ್ ಹಸ್ತಾಂತರಿಸಿದ್ದಾರೆ.

“ಸ್ವಾಮಿ ಶಂಕರ್ ದಾಸ್ ಅವರು ರಾಮ ಮಂದಿರ ಟ್ರಸ್ಟ್ ಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡುತ್ತಿರುವ ಮಾಹಿತಿ ಬರುತ್ತಿದ್ದಂತೆ ನಾವು ಬ್ಯಾಂಕ್ ಗೆ ಹೋದೆವು. ನಗದನ್ನು ಅವರು ನೇರವಾಗಿ ಕೊಡಲು ಸಾಧ್ಯವಿಲ್ಲ ಎಂದಿದ್ದರಿಂದ ಚೆಕ್ ಮೂಲಕ ಕೊಟ್ಟರು. ಸ್ವಾಮೀಜಿಯವರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಟ್ಟಿರುವುದು ತುಂಬಾ ಸಂತಸ ತಂದಿದೆ. ತಾವು ದೇಣಿಗೆ ನೀಡುತ್ತಿರುವುದು ಯಾರಿಗೂ ತಿಳಿಯದಿರಲಿ ಎಂದು ಸ್ವಾಮೀಜಿ ನಮ್ಮ ಬಳಿ ಕೇಳಿಕೊಂಡಿದ್ದರು. ಆದರೆ ಅವರ ಈ ದೇಣಿಗೆ ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿ ಎಂಬ ಕಾರಣಕ್ಕೆ ಈ ವಿಷಯ ಹಂಚಿಕೊಳ್ಳಲಾಗಿದೆ.” ಎಂದು ರಿಷಿಕೇಶ ಆರ್ ಎಸ್ ಎಸ್ ಮುಖಂಡ ಸುದಾಮ ಸಿಂಘಾಲ್ ಹೇಳಿದ್ದಾರೆ.

ಶಂಕರ್ ದಾಸ್, ಶಿಷ್ಯರಿಂದ ದಾನವಾಗಿ ಬಂದ ಹಣವನ್ನು ಬ್ಯಾಂಕ್ ನಲ್ಲಿಟ್ಟಿದ್ದರು. ದೇಣಿಗೆಯನ್ನು ರಹಸ್ಯ ದೇಣಿಗೆಯಾಗಿ ನೀಡಲು ಶಂಕರ್ ದಾಸ್ ಬಯಸಿದ್ದರು ಎನ್ನಲಾಗಿದೆ. ರಿಷಿಕೇಶ ಸಂತರ ನಗರ. ಅಲ್ಲಿನ ಕಾಡು, ಗುಹೆಗಳಲ್ಲಿ ಸಂತರನ್ನು ಕಾಣಬಹುದು. ಅನೇಕ ವರ್ಷಗಳಿಂದ ತಪಸ್ಸಿನಲ್ಲಿರುವ ಅನೇಕ ಸಂತರು ಅಲ್ಲಿ ಕಂಡು ಬರ್ತಾರೆ.

- Advertisement -
spot_img

Latest News

error: Content is protected !!