Sunday, April 28, 2024
Homeತಾಜಾ ಸುದ್ದಿಮುಂಬೈ: ಹೋಟೇಲ್ ಉದ್ಯಮ ಪುನರಾರಂಭಿಸಲು ಫೆಡರೇಶನ್ ಆಫ್ ಹೋಟೇಲ್ ಆಂಡ್ ರೆಸ್ಟೋರೆಂಟ್ ಅಸೋಷಿಯೇಶನ್ ನಿಂದ ಸರಕಾರಕ್ಕೆ...

ಮುಂಬೈ: ಹೋಟೇಲ್ ಉದ್ಯಮ ಪುನರಾರಂಭಿಸಲು ಫೆಡರೇಶನ್ ಆಫ್ ಹೋಟೇಲ್ ಆಂಡ್ ರೆಸ್ಟೋರೆಂಟ್ ಅಸೋಷಿಯೇಶನ್ ನಿಂದ ಸರಕಾರಕ್ಕೆ ಮನವಿ

spot_img
- Advertisement -
- Advertisement -

ಮುಂಬೈ: ಕೊವಿಡ್ ನಿಂದಾಗಿ ಸರಕಾರದ ಹೊಸ ನಿಯಮವನ್ನು ಪಾಲಿಸುದರೊಂದಿಗೆ ಹೋಟೇಲು ಉದ್ಯಮವನ್ನು ಪುನರಾರಂಭಿಸಲು ಫೆಡರೇಶನ್ ಆಫ್ ಹೋಟೇಲ್ ಆಂಡ್ ರೆಸ್ಟೋರೆಂಟ್ ಆಫ್ ಮಹಾರಾಷ್ಟ್ರ ಸರಕಾರವನ್ನು ವಿನಂತಿಸಿದೆ.

ಫೆಡರೇಶನ್ ನ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷರಾದ ಡಾ. ವಿರಾರ್ ಶಂಕರ ಶೆಟ್ಟಿ, ಮಹಾರಾಷ್ಟ್ರ ರಾಷ್ಟ್ರವಾದಿ ಹೋಟೇಲು ಕಾಮಗಾರ್ ಯೂನಿಯನ್ ನ ಅಧ್ಯಕ್ಷರಾದ ಕಳತ್ತೂರು ವಿಶ್ವನಾಥ ಜೆ ಶೆಟ್ಟಿ, ನವಿಮುಂಬಯಿ ಹೋಟೇಲು ಓನರ್ ಅಸೋಷಿಯೇಶನ್ ನ ಅಧ್ಯಕ್ಷರಾದ ಮಾರುತಿ ಎನ್ ಬೌರ್, ದಯಾನಂದ ಶೆಟ್ಟಿ, ಭಾಸ್ಕರ್ ಶೆಟ್ಟಿಯವರು ಈ ಬಗ್ಗೆ ಚರ್ಚಿಸಿ ’ವರ್ಷಾ’ ಬಂಗ್ಲೆಗೆ ಬೇಟಿಯಿತ್ತು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮಾತ್ರವಲ್ಲದೆ ಎಸ್.ಸಿ.ಪಿ. ಅಧ್ಯಕ್ಷ ಶರದ್ ಪವಾರ್ ಹಾಗೂ ಸಂಸದೆ ಸುಪ್ರಿಯಾ ಸುಳೆ ಯವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಕಳೆದ ಆರು ತಿಂಗಳಿಂದ ಅನುಭವಿಸುತ್ತಿರುವ ಹೋಟೇಲಿಗರ ಸಮಸ್ಯೆಯನ್ನು ಅವರ ಗಮನಕ್ಕೆ ತರುವುದರ ಮೂಲಕ ಪೂರ್ಣ ಪ್ರಮಾಣದಲ್ಲಿ ಹೋಟೇಲು ಹಾಗೂ ಬಾರ್ ರನ್ನು ಪ್ರಾರಂಭಿಸಲು ಅನುಮತಿಯನ್ನು ನೀಡಲು ವಿನಂತಿಸಲಾಯಿತು. ವಿಡಿಯೋ ಕಾನ್ಪರೆನ್ಸ್ ಮೂಲಕ ಸಂಮಂದಪಟ್ಟ ಎಲ್ಲರಲ್ಲೂ ಮಾತನಾಡಿ ಒಂದು ವಾರದಲ್ಲಿ ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುದಾಗಿ ಮುಖ್ಯಮಂತ್ರಿಯವರು ಅಸ್ವಾಸನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!