Saturday, May 4, 2024
Homeಮಹಾನ್ಯೂಸ್ಮುಂಬೈನಲ್ಲಿ ಮಾಸ್ಕ್ ಹಾಕದವರಿಗೆ ದಂಡ ಜೊತೆಗೆ ಸಿಗುತ್ತೆ ಉಚಿತ ಮಾಸ್ಕ್

ಮುಂಬೈನಲ್ಲಿ ಮಾಸ್ಕ್ ಹಾಕದವರಿಗೆ ದಂಡ ಜೊತೆಗೆ ಸಿಗುತ್ತೆ ಉಚಿತ ಮಾಸ್ಕ್

spot_img
- Advertisement -
- Advertisement -

ಮುಂಬೈ: ಕೊರೊನಾ ಹಿನ್ನೆಲೆ ಮಾಸ್ಕ್ ಹಾಕುವುದನ್ನು ಉತ್ತೇಜಿಸುವ ಸಲುವಾಗಿ ಬೃಹತ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಉತ್ತಮ ಕ್ರಮ ಕೈಗೊಂಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಾಮಾನ್ಯವಾಗಿ ಮಾಸ್ಕ್ ಹಾಕದ ಸಾರ್ವಜನಿಕರಿಗೆ ಸರ್ಕಾರ ಹಾಗೂ ನಗರ ಪಾಲಿಕೆಗಳು ದಂಡವನ್ನು ಮಾತ್ರ ವಿಧಿಸುತ್ತವೆ. ಆದರೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮಾಸ್ಕ್ ಹಾಕದವರಿಗೆ 200 ರೂ. ದಂಡದ ಜೊತೆಗೆ ಉಚಿತ ಮಾಸ್ಕ್ ನೀಡುವ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬಿಎಂಸಿ, ಏಪ್ರಿಲ್‍ನಿಂದ ನವೆಂಬರ್ 28ರ ವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದ 4.85 ಲಕ್ಷ ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸುಮಾರು 10.7 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ಆದರೆ ದಂಡ ಪಾವತಿಸಿದ ಬಳಿಕ ಮಾಸ್ಕ್ ಹಾಕದ ವ್ಯಕ್ತಿ ಆ ದಿನ ಹಾಗೇ ಸಂಚರಿಸುತ್ತಾನೆ. ಇದರಿಂದ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಅಲ್ಲದೆ ಇದರಿಂದ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ.

- Advertisement -
spot_img

Latest News

error: Content is protected !!