Friday, May 17, 2024
Homeತಾಜಾ ಸುದ್ದಿನಿವಾರ್ ಚಂಡಮಾರುತದಿಂದ ದಡಕ್ಕೆ ಬಂದ ಚಿನ್ನದ ರೀತಿಯ ಮಣಿಗಳು:ಚಂಡಮಾರುತ ಲೆಕ್ಕಿಸದೇ ಸಮುದ್ರದತ್ತ ಓಡಿದ ಜನ

ನಿವಾರ್ ಚಂಡಮಾರುತದಿಂದ ದಡಕ್ಕೆ ಬಂದ ಚಿನ್ನದ ರೀತಿಯ ಮಣಿಗಳು:ಚಂಡಮಾರುತ ಲೆಕ್ಕಿಸದೇ ಸಮುದ್ರದತ್ತ ಓಡಿದ ಜನ

spot_img
- Advertisement -
- Advertisement -

ಆಂಧ್ರಪ್ರದೇಶ: ನಿವಾರ್ ಚಂಡಮಾರುತದ ನಂತರ ಸಮುದ್ರ ತೀರದಲ್ಲಿ ಚಿನ್ನ ಸಿಗುತ್ತಿದೆ ಎಂದು ಜನರು ಕಡಲತ್ತ ಓಡಿದ ಘಟನೆ ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಸಮುದ್ರದಲ್ಲಿ ಅಲೆಗಳು ಅಬ್ಬರಿಸುತ್ತಿದ್ದರೂ ಲೆಕ್ಕಿಸದೆ ಜನರು ಉಪ್ಪಡಾ ಬೀಚ್​ನಲ್ಲಿ ಚಿನ್ನ ಆಯ್ದುಕೊಳ್ಳಲು ತಾಮುಂದು-ನಾಮುಂದು ಎಂದು ಓಡಿದ್ದಾರೆ.

ಇನ್ನು ಉಪ್ಪಡಾ ಬೀಚ್​ನಲ್ಲಿ ಪತ್ತೆಯಾದ ಹಳದಿ ಬಣ್ಣದ ಸಣ್ಣ ಮಣಿಯ ಫೋಟೋವನ್ನು ಸ್ಥಳೀಯರೊಬ್ಬರು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಚಿನ್ನಕ್ಕಾಗಿ 100ಕ್ಕೂ ಹೆಚ್ಚು ಮಂದಿ ಉಪ್ಪಡಾ ಬೀಚ್​ಗೆ ಆಗಮಿಸಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡರು ಎಂದು ತಿಳಿಸಿದ್ದಾರೆ.

ಅಂದ್ಹಾಗೆ ಈ ರೀತಿ ಚಿನ್ನ ಹೇಗೆ ಬರುತ್ತೆ ಅನ್ನೋ ಅನುಮಾನ ಎಲ್ಲರಲ್ಲೂ ಮೂಡೋದು ಸಹಜ. ಆದರೆ ಸ್ಥಳೀಯರು ಹೇಳೋದೋ ಬೇರೆ. ಈ ಭಾಗದಲ್ಲಿದ್ದ ಹಲವು ಪುರಾತನ, ಪ್ರಮುಖ ದೇವಸ್ಥಾನಗಳು ಕಾಲಕ್ರಮೇಣ ಸಮುದ್ರದಲ್ಲಿ ಮುಳುಗಿಹೋಗಿ, ಧ್ವಂಸಗೊಂಡಿವೆ. ಇದೀಗ ನಿವಾರ್​ ಚಂಡಮಾರುತದಿಂದ ದೊಡ್ಡದೊಡ್ಡ ಅಲೆಗಳು ಸಾಗರದೊಳಗಿಂದ ಏಳುತ್ತಿವೆ. ಹೀಗಾಗಿ ಸಮುದ್ರದ ಅಡಿಯಲ್ಲಿರಬಹುದಾದ ದೇಗುಲಗಳ ವಿಗ್ರಹದಲ್ಲಿರುವ ಆಭರಣಗಳು ಅಲೆಗಳೊಂದಿಗೆ ತೀರಕ್ಕೆ ಬರುತ್ತಿವೆ ಎನ್ನುತ್ತಿದ್ದಾರೆ.

ಇನ್ನು ಪೂರ್ವ ಗೋದಾವರಿಯ ಯು ಕೋಠಾಪಲ್ಲಿ ಮಂಡಲ್ ವ್ಯಾಪ್ತಿಯ ಹಳ್ಳಿಯಲ್ಲಿರುವ ಮೀನುಗಾರರಂತೂ ಬೀಚ್​ನಲ್ಲಿ ಬಿದ್ದ ಚಿನ್ನ ಆಯ್ದುಕೊಳ್ಳಲು ತರಾತುರಿಯಿಂದ ಓಡಿದ್ದಾರೆ. ಮುಂಜಾನೆ ಆರುಗಂಟೆಯಿಂದ, ಸಂಜೆಯವರೆಗೂ ಸಮುದ್ರ ತೀರದಲ್ಲಿ ಕಾಲ ಕಳೆದಿದ್ದಾರೆ. ಬಲವಾಗಿ ಗಾಳಿಬೀಸುತ್ತಿದ್ದರೂ ಲೆಕ್ಕಿಸದೆ ಮಹಿಳೆಯರು, ಮಕ್ಕಳು ಬೀಚ್​ನಲ್ಲಿ ಗುಂಪುಗೂಡಿದ್ದರು. ಅನೇಕರಿಗೆ ಹಳದಿ ಬಣ್ಣದ ಮಣಿಗಳು ಸಿಕ್ಕಿವೆ. ಆದರೆ ಅದು ಚಿನ್ನವೇ ಹೌದೋ..ಅಲ್ಲವೋ ಎಂಬುದಿನ್ನೂ ದೃಢವಾಗಿಲ್ಲ.

ಪ್ರತಿ ಚಂಡಮಾರುತವೂ ಚಿನ್ನ ಅಥವಾ ಇನ್ಯಾವುದಾದರೂ ಬೆಲೆಬಾಳುವ ವಸ್ತುಗಳನ್ನು ತೀರಕ್ಕೆ ತರುತ್ತದೆ ಎಂದು ನಂಬುವ ಮೀನುಗಾರರು, ಈ ಬಾರಿ ಚಂಡಮಾರುತದ ಬಳಿಕವೂ ಬೀಚ್​ನಲ್ಲಿ ಹುಡುಕಾಟ ನಡೆಸಿದ್ದರು.

- Advertisement -
spot_img

Latest News

error: Content is protected !!