Thursday, July 16, 2026
Homeಕರಾವಳಿಮಂಗಳೂರುಉಳ್ಳಾಲದಲ್ಲಿ ರಸ್ತೆ ದಾಟುತ್ತಿದ್ದಾಗ ಮಗುವಿನ ಮೇಲೆ ಚಲಿಸಿದ ಟ್ಯಾಂಕರ್

ಉಳ್ಳಾಲದಲ್ಲಿ ರಸ್ತೆ ದಾಟುತ್ತಿದ್ದಾಗ ಮಗುವಿನ ಮೇಲೆ ಚಲಿಸಿದ ಟ್ಯಾಂಕರ್

- Advertisement -
- Advertisement -

ಉಳ್ಳಾಲ: ತಾಯಿ ಮತ್ತು ಮಕ್ಕಳು ರಸ್ತೆ ದಾಟುತ್ತಿದ್ದ ವೇಳೆ ಮಗುವಿನ ಮೇಲೆ ಚಲಿಸಿದ ಪರಿಣಾಮ 4 ವರ್ಷದ ಮಗು ಗಂಭೀರ ಗಾಯಗೊಂಡಿರುವ ಘಟನೆ ಉಳ್ಳಾಲ ಬೈಲಿನಲ್ಲಿ ನಡೆದಿದೆ.

ಉತ್ತರಪ್ರದೇಶ ಮೂಲದ ಉಳ್ಳಾಲ ಬೈಲಿನ ಬಾಕಿಮಾರಿನಲ್ಲಿ ವಾಸವಿದ್ದ  ನಾಲ್ಕು ವರ್ಷದ ಕೃಷ್ಣ ಎಂಬ ಮಗು ಗಂಭೀರ ಗಾಯಗೊಂಡಿದೆ. ಮಗು ತನ್ನ ತಾಯಿ, ಚಿಕ್ಕಮ್ಮ ಹಾಗೂ ಇಬ್ಬರು ಅಕ್ಕಂದಿರ ಜೊತೆ ರಸ್ತೆ ದಾಟುತ್ತಿದ್ದ  ವೇಳೆ ತೊಕ್ಕೊಟ್ಟಿನಿಂದ ಉಳ್ಳಾಲಕ್ಕೆ ಬರುತ್ತಿದ್ದ  ನೀರಿನ ಟ್ಯಾಂಕರ್ ಮನೆ ಮಂದಿ ನೋಡುತ್ತಿದ್ದಂತೆಯೇ ಕೃಷ್ಣನ ಮೇಲೆ ಹರಿದಿದೆ. ಪರಿಣಾಮ ಮಗುವಿನ ಕಾಲಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು  ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!