Wednesday, June 24, 2026
Homeಕರಾವಳಿಕಾಸರಗೋಡುಮೂಡಬಿದಿರೆ; ಹೊಟೇಲ್ ಆರಂಭಿಸುವ ಸಿದ್ಧತೆಯಲ್ಲಿದ್ದ ಯುವಕ ನೇಣಿಗೆ ಶರಣು

ಮೂಡಬಿದಿರೆ; ಹೊಟೇಲ್ ಆರಂಭಿಸುವ ಸಿದ್ಧತೆಯಲ್ಲಿದ್ದ ಯುವಕ ನೇಣಿಗೆ ಶರಣು

- Advertisement -
- Advertisement -

ಮೂಡಬಿದಿರೆ; ಹೊಟೇಲ್ ಆರಂಭಿಸುವ ಸಿದ್ಧತೆಯಲ್ಲಿದ್ದ ಯುವಕ ನೇಣಿಗೆ ಶರಣಾಗಿರುವ ಘಟನೆ ಮೂಡಬಿದಿರೆಯ ನಾಗರಕಟ್ಟೆ ಎಂಬಲ್ಲಿ ನಡೆದಿದೆ.


ನಾಗರಕಟ್ಟೆ-ಒಂಟಿಕಟ್ಟೆ ಕ್ರಾಸ್ ರಸ್ತೆ ಬಳಿ ಕಬ್ಬಿನ ಹಾಲಿನ ಅಂಗಡಿ ನಡೆಸುತ್ತಿರುವ ಶ್ರೀನಿವಾಸ್ ಎಂಬುವವರ ಪುತ್ರ ದೀಕ್ಷಿತ್ (35) ಮೃತರು. ದುಬೈನಿಂದ ಹಿಂದಿರುಗಿದ್ದ ದೀಕ್ಷಿತ್, ನಾಗರಕಟ್ಟೆಯ ರಿಂಗ್ ರೋಡ್ ಬಳಿ ಹೊಟೇಲ್ ವ್ಯವಹಾರ ಪ್ರಾರಂಭಿಸಲು ಯೋಜಿಸಿದ್ದರು. ಹಾಗೂ ಹೊಟೇಲ್ ಆರಂಭಿಸಲು ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದರು.ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮಲಗಿದ್ದ ಸಮಯದಲ್ಲಿ, ದೀಕ್ಷಿತ್ ಮನೆಯ ಕೋಣೆಯೊಂದರ ಕಿಟಕಿ ಸರಳಿಗೆ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!