Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ವೇಣೂರಿನ ಅನಧಿಕೃತ ಬ್ರೈಟ್ ಶಾಲೆಯ ಕಾಮಗಾರಿ ಸ್ಥಳಕ್ಕೆ ಇಒ ಭೇಟಿ ನೀಡಿ ಎಚ್ಚರಿಕೆ

ಬೆಳ್ತಂಗಡಿ : ವೇಣೂರಿನ ಅನಧಿಕೃತ ಬ್ರೈಟ್ ಶಾಲೆಯ ಕಾಮಗಾರಿ ಸ್ಥಳಕ್ಕೆ ಇಒ ಭೇಟಿ ನೀಡಿ ಎಚ್ಚರಿಕೆ

- Advertisement -
- Advertisement -

ಬೆಳ್ತಂಗಡಿ : ಕಾನೂನು ಬಾಹಿರವಾಗಿ ಯಾವುದೇ ಅನುಮತಿಗಳನ್ನು ಪಡೆಯದೆ ಅನಧಿಕೃತವಾಗಿ ವೇಣೂರು ಗ್ರಾಮದ ಕರಿಮಣೇಲುನಲ್ಲಿರುವ ಬ್ರೈಟ್ ಹಾರಿಜೋನ್ ಇಂಟರ್ ನ್ಯಾಷನಲ್ ಸ್ಕೂಲ್ / ಬೆಸ್ಟ್ ವಸತಿ ಶಾಲೆಯ ಕಟ್ಟಡ ನಿರ್ಮಾಣ ಮಾಡುತ್ತಿರುವ ಕಾಮಗಾರಿಯನ್ನು ಅಧಿಕಾರಿಗಳು ಬ್ರೇಕ್ ಹಾಕಿದ್ರೂ ಕೆಲಸ ಮಾತ್ರ ಮುಂದುವರಿಸಿದ್ದರು. ಈ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಕೆಲಸ ಮಾಡುತ್ತಿರುವ ಫೋಟೋ ಸಮೇತ ಜ.19 ರಂದು ವರದಿ ಬಿತ್ತರಿಸಿದ ಬಳಿಕ ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವೇಣೂರು ಗ್ರಾಮ ಪಂಚಾಯತ್ ಪಿಡಿಒ ತೆರಳಿ ಕೆಲಸ ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಅಕ್ರಮ ಕಾಮಗಾರಿ ನಡೆಯುತ್ತಿರುವ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿ ಬಿತ್ತರಿಸಿದ ಬಳಿಕ ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಜ.19 ರಂದು ಸಂಜೆ ವೇಣೂರು ಗ್ರಾಮ ಪಂಚಾಯತ್ ಪಿಡಿಒ ಪ್ರಕಾಶ್ ಅವರನ್ನು ಕರೆದುಕೊಂಡು ಬ್ರೈಟ್ ಶಾಲೆಗೆ ಭೇಟಿ ನೀಡಿದಾಗ ಕಾರ್ಮಿಕರು ಯಾವ ಕೆಲಸಗಳು ನಡೆಯುತ್ತಿರಲಿಲ್ಲ. ಟೇಪ್ ಹಾಕಿದ್ರೂ, ಟೇಪ್ ಕಳಚಿ ಕಟ್ಟಡದ ಕೆಲಸ ಮಾಡಿರುವುದು ಕಂಡು ಬಂದಿದೆ. ಅಲ್ಲಿನ ಕಾಮಗಾರಿ ಕೆಲಸ ಮಾಡಿಸುವ ಅಶ್ರಫ್ ಮತ್ತು ಕೆಲಸ ಮಾಡುವ ಕಾರ್ಮಿಕರನ್ನು ಕರೆದು ಕೆಲಸ ಮುಂದುವರಿಸದಂತೆ ಎಚ್ಚರಿಕೆ ನೀಡಲಾಗಿದೆ. ಕೆಲಸ ಮುಂದುವರಿಸಿದ್ರೆ ಪೊಲೀಸರನ್ನು ಕರೆದುಕೊಂಡು ಬಂದು ಪ್ರಕರಣ ದಾಖಲಿಸಿ ಕೋರ್ಟ್ ನಿಂದ ಸ್ಟೇ ತರಿಸಲಾಗುವುದು ಎಂದು ಇಒ ಭವಾನಿ ಶಂಕರ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಎರಡು,ಮೂರು ದಿನಕ್ಕೊಮ್ಮೆ ಸ್ಥಳಕ್ಕೆ ಭೇಟಿ ನೀಡಲಾಗುವುದು ಎಂದು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ಮಾಹಿತಿ ನೀಡಿದ್ದಾರೆ.

ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ನೇತೃತ್ವದಲ್ಲಿ ವೇಣೂರು ಗ್ರಾಮದ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ತಂಡದ ಅಧಿಕಾರಿಗಳು ವೇಣೂರು ಗ್ರಾಮದ ಕರಿಮಣೇಲುನಲ್ಲಿರುವ ಸರ್ವೆ ನಂಬರ್ 125/2A,125/2B2,155/1C2,155/1B ರಲ್ಲಿ ಬ್ರೈಟ್ ಹಾರಿಜೋನ್ ಇಂಟರ್ ನ್ಯಾಷನಲ್ ಸ್ಕೂಲ್ / ಬೆಸ್ಟ್ ವಸತಿ ಶಾಲೆಯ ಅನಧಿಕೃತ ಕಟ್ಟಡದ ಕಾಮಗಾರಿಯನ್ನು ಜ.14 ರಂದು ನಿಲ್ಲಿಸಿ ಸಕ್ಷಮ ಪ್ರಾಧಿಕಾರದಿಂದ ಎಚ್ಚರಿಕೆ ಟೇಪ್ ಅಳವಡಿಸಿ ಕಾಮಗಾರಿ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಿ ಸ್ಥಗಿತಗೊಳಿಸಿದ್ದು. ಇದನ್ನು ಉಲ್ಲಂಘಿಸಿ ಕಾಮಗಾರಿಯನ್ನು ಪುನರ್ ಆರಂಭಿಸಿದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕಾರ ಹಾಗೂ ಅಕ್ರಮ ಕಟ್ಟಡಗಳನ್ನು ನಿರ್ಬಂಧಿಸುವ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ಮತ್ತು ಕರ್ನಾಟಕ ಸರಕಾರ ಸುತ್ತೋಲೆ ಸಂಖ್ಯೆ ಆರ್.ಡಿ.ಪಿ.ಆರ್ /27/ಜಿಪಿಎ 2025 ದಿನಾಂಕ 13-05-2025 ರಂತೆ ಕಾನೂನು ಕ್ರಮವನ್ನು ಸಂಬಂಧಪಟ್ಟರವ ಮೇಲೆ ಜರುಗಿಸಲಾಗುವುದು ಎಂದು ಎಚ್ಚರಿಕೆ ಬ್ಯಾನರ್ ಹಾಕಲಾಗಿತ್ತು. ಆದ್ರೆ ಕಾಮಗಾರಿಯನ್ನು ಮತ್ತೆ 40 ರಿಂದ 50 ಮಂದಿ ಕಾರ್ಮಿಕರನ್ನು ಕರೆತಂದು ಕಾನೂನನ್ನು ಗಾಳಿಗೆ ತೂರಿ ಮುಂದುವರಿಸಿದ್ದರು.

ಬೆಳ್ತಂಗಡಿ ತಾಲೂಕಿನ ವೇಣೂರು, ಕರಿಮಣೇಲು ಗ್ರಾಮದಲ್ಲಿ ಮೂಡಬಿದಿರೆಯ ನಿವಾಸಿ ಡಾ.ಶರತ್ ಗೋರೆ ಎಂಬವರ ಮಾಲೀಕತ್ವದ “ಬ್ರೈಟ್ ಹಾರಿಜೋನ್ ಇಂಟರ್ ನ್ಯಾಷನಲ್ ಸ್ಕೂಲ್/ಬೆಸ್ಟ್ ವಸತಿ ಶಾಲೆ ಎಂಬ ಹೆಸರಿನಲ್ಲಿ ಅನಧಿಕೃತವಾಗಿ ಬೃಹತ್ ಮಹಡಿಯನ್ನು ನಿರ್ಮಾಣ ಕಾಮಗಾರಿ ಕೆಲಸ ಮಾಡುತ್ತಿದ್ದರು.ಈ ಅಕ್ರಮ ಕಟ್ಟಡ ಕಾಮಗಾರಿಯ ಮಾಡುತ್ತಿರುವ ಬಗ್ಗೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ವೇಣೂರು ಅಭಿವೃದ್ಧಿ ಅಧಿಕಾರಿಗಳಿಗೆ ಜ.12 ರಂದು ಲಿಖಿತ ಪತ್ರದ ಮೂಲಕ ದೂರು ಸಲ್ಲಿಸಿದ್ದರು.

- Advertisement -

Latest News

error: Content is protected !!