Saturday, June 6, 2026
Homeಅಪರಾಧಎಟಿಎಂಗೆ ಹಾಕಲು ಹಣ ಕೊಟ್ಟರೆ, ಎಟಿಎಂನ ಹಣವನ್ನೇ ದೋಚಿ ಪರಾರಿಯಾದ ಭೂಪ

ಎಟಿಎಂಗೆ ಹಾಕಲು ಹಣ ಕೊಟ್ಟರೆ, ಎಟಿಎಂನ ಹಣವನ್ನೇ ದೋಚಿ ಪರಾರಿಯಾದ ಭೂಪ

- Advertisement -
- Advertisement -

ಬಳ್ಳಾರಿ: ಎಟಿಎಂಗೆ ಹಾಕಬೇಕಾಗಿದ್ದ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಬಳ್ಳಾರಿಯ ಬ್ರೂಸ್ ಪೇಟ್ ಪೊಲೀಸರು ಬಂಧಿಸಿದ್ದಾರೆ.

ಸಿಎಂಎಸ್ ಕಂಪೆನಿಯೊಂದರಲ್ಲಿ ಕಸ್ಟೋಡಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನೀಲಕಂಠ ಬಂಧಿತ ಆರೋಪಿ. ಕರ್ಣಾಟಕ ಬ್ಯಾಂಕ್‍ನವರು, ಕರ್ಣಾಟಕ ಬ್ಯಾಂಕ್ ಎಟಿಎಂಗಳಿಗೆ ಹಣ ಹಾಕುವಂತೆ ನೀಲಕಂಠಣಿಗೆ ಸುಮಾರು 50.18ಲಕ್ಷ ಮೊತ್ತವನ್ನು ನೀಡಿದ್ದರು. ಆದರೆ ನೀಲಕಂಠ ಎಟಿಎಂಗೆ ಹಣ ಹಾಕುವ ಬದಲು 50.18 ಲಕ್ಷದ ಜೊತೆಗೆ ಎಟಿಎಂನಲ್ಲಿದ್ದ 56.18 ಲಕ್ಷ ಹಣವನ್ನು ಕದ್ದು ಪರಾರಿಯಾಗಿದ್ದ.

ಈ ಘಟನೆಯು ಶನಿವಾರ ನಡೆದಿದ್ದು, ಪ್ರಕರಣ ನಡೆದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಕದ್ದಿರುವ ಹಣದಿಂದ ನೀಲಕಂಠ ಮೊಬೈಲ್ ತೆಗೆದುಕೊಂಡಿದ್ದು, ಪೊಲೀಸರು ಮೊಬೈಲ್ ಸಮೇತ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. 

- Advertisement -

Latest News

error: Content is protected !!