Monday, April 29, 2024
Homeಕರಾವಳಿಉಡುಪಿಭಾರತದ ಸದೃಢ ಆರ್ಥಿಕ ವ್ಯವಸ್ಥೆಗೆ ’ಮೋದಿ ಮಾಡೆಲ್ ಅಜೆಂಡಾ'; ದೇವೇಂದ್ರ ಫಡ್ನವಿಸ್

ಭಾರತದ ಸದೃಢ ಆರ್ಥಿಕ ವ್ಯವಸ್ಥೆಗೆ ’ಮೋದಿ ಮಾಡೆಲ್ ಅಜೆಂಡಾ’; ದೇವೇಂದ್ರ ಫಡ್ನವಿಸ್

spot_img
- Advertisement -
- Advertisement -

ಮಣಿಪಾಲ: ಜಿಲ್ಲಾ ಬಿಜೆಪಿ ವತಿಯಿಂದ ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ, ಭಾರತದ ಸದೃಢ ಆರ್ಥಿಕ ವ್ಯವಸ್ಥೆಗೆ “ಮೋದಿ ಮಾಡೆಲ್ ಅಜೆಂಡಾ” ಆಗಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.

‘10 ವರ್ಷದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಭಾರತದ ಅರ್ಥ ವ್ಯವಸ್ಥೆಯನ್ನು ಪ್ರಧಾನಿ ಮೋದಿಯವರು ಸುಧಾರಿಸಿದ್ದಾರೆ. ಮಾತ್ರವಲ್ಲದೆ, ಮುಂದಿನ ಕೆಲವೇ ವರ್ಷಗಳಲ್ಲಿ ವಿಶ್ವದ ಮೂರನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತವನ್ನು ರೂಪಿಸಲಿದ್ದಾರೆ ಎಂಬುದನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ವರದಿಯಲ್ಲಿ ಉಲ್ಲೇಖೀಸಿದ್ದವು. ಅದೇ ಸಂಸ್ಥೆಗಳು ಈಗ ಭಾರತದ ಆರ್ಥಿಕತೆ ವಿಶ್ವದ ಪ್ರಗತಿಶೀಲ ಆರ್ಥಿಕತೆಯಲ್ಲಿ ಒಂದಾಗಿದೆ ಎಂಬುದಾಗಿ ತಿಳಿಸಿವೆ. ಇದು ಮೋದಿ ಗ್ಯಾರಂಟಿ,’ ಎಂದರು.

ಅನಂತರ ಪ್ರಶೋತ್ತರ ನಡೆಯಿತು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವನೆಗೈದರು. ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ದ.ಕ. ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣ ಸಂಚಾಲಕ ನವೀನ್ ಕುತ್ಯಾರ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!