Sunday, April 28, 2024
Homeಕ್ರೀಡೆವಿರಾಟ್ ಕೊಹ್ಲಿಗೆ T20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದಿಲ್ಲವೇ?

ವಿರಾಟ್ ಕೊಹ್ಲಿಗೆ T20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದಿಲ್ಲವೇ?

spot_img
- Advertisement -
- Advertisement -

ಹೊಸದಿಲ್ಲಿ: ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದಿಲ್ಲವೇ? ಇಂಥದೊಂದು ಅನುಮಾನ, ಗುಸುಗುಸು ಹುಟ್ಟಿಕೊಂಡಿದೆ.

2013ರ ಅನಂತರ ಭಾರತ ಸತತವಾಗಿ ಐಸಿಸಿ ಕೂಟಗಳ ಫೈನಲ್, ಸೆಮಿಫೈನಲ್‌ಗಳಲ್ಲಿ ಸೋಲುತ್ತಿದೆ. ಈ ಬಾರಿ ವೆಸ್ಟ್ ಇಂಡೀಸ್ ಅಮೆರಿಕದಲ್ಲಿ ನಡೆಯುವ ಟಿ20 ವಿಶ್ವಕಪ್ ನಲ್ಲಿ ಗೆಲ್ಲಲೇಬೇಕೆಂಬ ತೀರ್ಮಾ ನದಲ್ಲಿರುವ ಬಿಸಿಸಿಐ, ಯುವಕರಿಗೆ ಮಣೆ ಹಾಕುವ ನಿರೀಕ್ಷೆಯಿದೆ. ಹೀಗಾಗಿ ಕೊಹ್ಲಿಗೆ ಜಾಗ ಅನುಮಾನ ಎನ್ನಲಾಗಿದೆ. ಇದು ಒಂದು ತರ್ಕ

ಟಿ20ಗೆ ಸಮರ್ಥರಲ್ಲ; ಮೂಲಗಳ ಪ್ರಕಾರ, ಟಿ20 ಕ್ರಿಕೆಟ್‌ನ ಅಗತ್ಯಗಳಿಗೆ ತಕ್ಕಂತೆ ಕೊಹ್ಲಿ ಆಡಲು ಸಮರ್ಥರಲ್ಲ ಎಂಬ ವಾದ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಕೇಳಿ ಬರುತ್ತಿದೆಯಂತೆ. ಆದರೆ ಈ ಬಗ್ಗೆ ದೃಢವಾಗಿ ಮಾತನಾಡಲು ಯಾರೂ ಸಿದ್ಧರಿಲ್ಲ. ಇವೆಲ್ಲದರ ನಡುವೆ ತಂಡದ ನಾಯಕತ್ವವನ್ನು ಹಿರಿಯ ಆಟಗಾರ ರೋಹಿತ್‌ ಶರ್ಮ ಅವರಿಗೇ ನೀಡುವ ಯೋಜನೆ ಬಿಸಿಸಿಐನದ್ದು.

ಟಿ20ಯಲ್ಲಿ ಸ್ಫೋಟಕವಾಗಿ ಆಡುವ ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ತಿಲಕ್ ವರ್ಮ, ಶಿವಂ ದುಬೆ ಅವರ ಮೇಲೆ ಬಿಸಿಸಿಐ ಕಣ್ಣಿರಿಸಿದೆ. ಅಲ್ಲದೇ ಈಗಷ್ಟೇ ಚೇತರಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಲೂ ಬಹುದು. ಕೊಹ್ಲಿ ಆಡುವುದರ ಬಗ್ಗೆ ಅಂತಿಮ ನಿರ್ಧಾರವನ್ನು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಕೊಹ್ಲಿ ಆಸ್ಟ್ರೇಲಿಯದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ 6 ಪಂದ್ಯಗಳಿಂದ 296 ರನ್ ಗಳಿಸಿದ್ದರು. ಇದರಲ್ಲಿ 4 ಅರ್ಧ ಶತಕಗಳಿದ್ದವು. 2023ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿ 765 ರನ್ ಗಳಿಸಿದ್ದರು. ಈ ಎರಡೂ ಕೂಟಗಳಲ್ಲಿ ಗರಿಷ್ಠ ರನ್ ಬಾರಿಸಿದ್ದು ಕೊಹ್ಲಿ ಎನ್ನುವುದನ್ನು ಮರೆಯುವಂತಿಲ್ಲ.

- Advertisement -
spot_img

Latest News

error: Content is protected !!