- Advertisement -
![]()
- Advertisement -
ಬಂಟ್ವಾಳ: ಸೆಪ್ಟೆಂಬರ್ 1ರಂದು ಹಾವೇರಿಯಲ್ಲಿ ನಡೆಯುವ ಅಗ್ನಿವೀರ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಬಂಟ್ವಾಳ ತಾಲೂಕಿನ ಅಭ್ಯರ್ಥಿಗಳೊಂದಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ತನ್ನ ಕಚೇರಿಯಲ್ಲಿ ಸಂವಾದ ನಡೆಸಿದರು.

ಶಾಸಕರ ಆಪ್ತ ಸಹಾಯಕರಾದ ಶಿವಾನಂದ ಪೂಜಾರಿ ಇವರು ಶಿಬಿರದ ಸಂದರ್ಭದಲ್ಲಿ ಅಗತ್ಯವಾಗಿ ಬೇಕಿರುವ ದಾಖಲೆಗಳ ಮಾಹಿತಿಯನ್ನು ಒದಗಿಸಿದರು.ಹಾವೇರಿಗೆ ತೆರಳಲಿರುವ ಅಭ್ಯರ್ಥಿಗಳಿಗೆ ಶಾಸಕರಾದ ರಾಜೇಶ್ ನಾಯ್ಕ್ ಅವರು ಉಚಿತ ಬಸ್ ವ್ಯವಸ್ಥೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬೂಡ ಅಧ್ಯಕ್ಷರಾದ ದೇವದಾಸ್ ಶೆಟ್ಟಿ,ಬಿಜೆಪಿ ಬಂಟ್ವಾಳ ಮಂಡಲ ಪ್ರ.ಕಾರ್ಯದರ್ಶಿ ಡೊಂಬಯ ಅರಳ, ಪ್ರಮುಖರಾದ ಪ್ರಕಾಶ್ ಅಂಚನ್,ಶಾಂತಪ್ಪ ಪೂಜಾರಿ,ಪೂವಪ್ಪ ಮೆಂಡನ್,ರಘುರಾಮ ಶೆಟ್ಟಿ ಕನ್ಯಾನ,ಪ್ರಣಾಮ್ ರಾಜ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.

- Advertisement -


