Saturday, May 18, 2024
Homeಕರಾವಳಿಉಡುಪಿ2022ನೇ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ

2022ನೇ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ

spot_img
- Advertisement -
- Advertisement -

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ನೇ ಸಾಲಿನ ಪ್ರಶಸ್ತಿಗಳನ್ನ ಪ್ರಕಟ ಮಾಡಲಾಗಿದೆ.
ಪಾರ್ತಿಸುಬ್ಬ ಪ್ರಶಸ್ತಿಗೆ ಪ್ರಸಂಗಕರ್ತ ಹಾಗೂ ಯಕ್ಷಗಾನ ಗುರು ಗಣೇಶ ಕೊಲೆಕಾಡಿ ಆಯ್ಕೆಗೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಜಿ.ಎಲ್. ಹೆಗಡೆ ಅವರು ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿ ಪಾರ್ತಿಸುಬ್ಬ ಪ್ರಶಸ್ತಿಯು 1 ಲಕ್ಷ ರೂ. ನಗದು ಒಳಗೊಂಡಿದೆ ಎಂದು ವಿವರಿಸಿದರು.

2022ನೇ ಸಾಲಿನ ಗೌರವ ಪ್ರಶಸ್ತಿಗೆ ತೆಂಕುತಿಟ್ಟಿನ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ (ಮಂಗಳೂರು), ತೆಂಕುತಿಟ್ಟು ಭಾಗವತ ಪಟ್ಲ ಸತೀಶ್ ಶೆಟ್ಟಿ (ಮಂಗಳೂರು), ಮೂಡಲಪಾಯ ಯಕ್ಷಗಾನ ಭಾಗವತ ಹಾಗೂ ಕಲಾವಿದ ಭಾಗವತ ಚಂದಯ್ಯ (ತುಮಕೂರು), ಭಾಗವತ ಹಾಗೂ ಪಾರಂಪರಿಕ ಯಕ್ಷಗಾನ ಕಲಾವಿದ ಭಾಗವತ ಉಮೇಶ ಭಟ್ ಬಾಡ (ಉತ್ತರ ಕನ್ನಡ) ಮತ್ತು ಭಾಗವತ ಹಾಗೂ ಬಡಗುತಿಟ್ಟು ಯಕ್ಷಗಾನ ಕಲಾವಿದ ಕೆ.ಪಿ. ಹೆಗಡೆ (ಉಡುಪಿ) ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿ ತಲಾ 50 ಸಾವಿರ ರೂ. ನಗದು ಒಳಗೊಂಡಿದೆ.

ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಯಕ್ಷಗಾನ ಕ್ಷೇತ್ರದ 10 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ಪಾರಂಪರಿಕ ಯಕ್ಷಗಾನ ಕಲಾವಿದ ಹುಕ್ಕಲಮಕ್ಕಿ ಕಮಲಾಕರ ಹೆಗಡೆ (ಉತ್ತರ ಕನ್ನಡ) ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳು ತಲಾ 25 ಸಾವಿರ ರೂ. ನಗದು ಒಳಗೊಂಡಿವೆ.

2021ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಮಂಗಳೂರಿನ ಪೊಳಲಿ ನಿತ್ಯಾನಂದ ಕಾರಂತ ಅವರ ಯಕ್ಷಗಾನ ಪ್ರಸಂಗ ಸಂಪುಟ, ಬೆಳಗಾವಿಯ ಎಲ್‌.ಎಸ್. ಶಾಸ್ತ್ರಿ ಅವರ ಯಕ್ಷಗಾನ ನಕ್ಷತ್ರಗಳು ಹಾಗೂ ಬೆಂಗಳೂರಿನ ವಿದ್ಯಾರಶ್ಮಿ ಪೆಲತ್ತಡ್ಕ ಅವರ ಯಕ್ಷಗಾನ ಲೀಲಾವಳಿ ಕೃತಿಗಳು ಆಯ್ಕೆಯಾಗಿವೆ. ಈ ಬಹುಮಾನವು ತಲಾ 25 ಸಾವಿರ ರೂ. ನಗದು ಒಳಗೊಂಡಿವೆ.

ಪಾರ್ತಿಸುಬ್ಬ ಸೇರಿ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳ ಪ್ರದಾನ ಸಮಾರಂಭವು ಸೆಪ್ಟೆಂಬರ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಉಡುಪಿಯ ಕಮಲಶಿಲೆಯಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಜಿ.ಎಲ್. ಹೆಗಡೆ ತಿಳಿಸಿದರು.

ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಕೋಲ್ಯಾರು ರಾಜು ಶೆಟ್ಟಿ; ಹೊರನಾಡು ಕನ್ನಡಿಗ, ಯಕ್ಷಗಾನ‌ ಕಲಾವಿದ, ಕೃಷ್ಣನಾಯ್ಕ ಜಿ. ಬೇಡ್ಕಣಿ; ಉತ್ತರ ಕನ್ನಡ, ಬಡಾಬಡಗು ಯಕ್ಷಗಾನ ಕಲಾವಿದ, ಕೃಷ್ಣ ಗಾಣಿಗ ಕೋಡಿ, ಉಡುಪಿ, ಬಡಗತಿಟ್ಟು ಯಕ್ಷಗಾನ ಕಲಾವಿದ, ಶುಭಾನಂದ ಶೆಟ್ಟಿ, ಕಾಸರಗೋಡು, ತೆಂಕುತಿಟ್ಟು ಯಕ್ಷಗಾನ ಕಲಾವಿದ, ಕವ್ವಾಳೆ ಗಣಪತಿ ಭಾಗವತ, ಉತ್ತರ ಕನ್ನಡ, ಬಡಾಬಡಗು ಯಕ್ಷಗಾನ ಕಲಾವಿದ, ಬಾಲಕೃಷ್ಣ ನಾಯಕ್ ಉಡುಪಿ, ಬಡಗುತಿಟ್ಟು ಯಕ್ಷಗಾನ ಪ್ರಸಾದನ ಕಲಾವಿದ, ಎಸ್‌.ಪಿ. ಅಪ್ಪಯ್ಯ, ಬೆಂಗಳೂರು, ಮೂಡಲಪಾಯ ಯಕ್ಷಗಾನ ಕಲಾವಿದ, ಕೊಲ್ಲೂರು ಕೊಗ್ಗ ಆಚಾರ್ಯ; ಉಡುಪಿ, ಬಡಗುತಿಟ್ಟು ಯಕ್ಷಗಾನ ಹಿಮ್ಮೇಳ ಕಲಾವಿದ, ಡಿ. ಭೀಮಯ್ಯ, ತುಮಕೂರು; ಮೂಡಲಾಪಯ ಯಕ್ಷಗಾನ ಕಲಾವಿದ ಮತ್ತು ಅಜಿತ್ ಕುಮಾರ್ ಜೈನ್ ಉಡುಪಿ,‌ ತೆಂಕುತಿಟ್ಟು ಯಕ್ಷಗಾನ ಕಲಾವಿದ ಆಯ್ಕೆಯಾಗಿದ್ದಾರೆ.

- Advertisement -
spot_img

Latest News

error: Content is protected !!