Sunday, June 7, 2026
Homeತಾಜಾ ಸುದ್ದಿಮಂಗಳೂರು: ಮೋದಿ ಆಗಮನದ ಹಿನ್ನೆಲೆ: ಮೈದಾನದ ಬಳಿಯಿದ್ದ ಟೆಂಟ್‌ಗಳ ತೆರವು

ಮಂಗಳೂರು: ಮೋದಿ ಆಗಮನದ ಹಿನ್ನೆಲೆ: ಮೈದಾನದ ಬಳಿಯಿದ್ದ ಟೆಂಟ್‌ಗಳ ತೆರವು

- Advertisement -
- Advertisement -

ಮಂಗಳೂರು: ಸೆಪ್ಟೆಂಬರ್​ 2ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಮೈದಾನದ ಬಳಿಯಿರುವ 30 ಕ್ಕೂ ಅಧಿಕ ಟೆಂಟ್ ಗಳನ್ನು ತೆರವುಗೊಳಿಸಲಾಗಿದೆ. ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನ ಬಳಿ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆ ಭದ್ರತಾ ಕಾರಣಗಳಿಗಾಗಿ ಪಾರ್ಕಿಂಗ್ ಮತ್ತು ಇತರ ಕಾರ್ಯಕ್ರಮ ಸಂಬಂಧಿತ ಅವಶ್ಯಕತೆಗಳಿಗಾಗಿ ಮೈದಾನದ ಬಳಿಯಿರುವ ಟೆಂಟ್​ ನಿವಾಸಿಗಳನ್ನು ಸ್ಥಳಾಂತರಗೊಳ್ಳಲು ತಿಳಿಸಲಾಗಿದೆ.

ಟೆಂಟ್‌ಗಳಲ್ಲಿದ್ದವರಿಗೆ ಸ್ಥಳೀಯ ಕಾರ್ಪೊರೇಟರ್ ನೆರವಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.

- Advertisement -

Latest News

error: Content is protected !!