ಸುರತ್ಕಲ್: ಹೇಡಿಗಳಂತೆ ರಾತ್ರಿ ವೇಳೆ ಬಂದು ಹಿಂದೂ ಧಾರ್ಮಿಕ ಸ್ಥಳಗಳನ್ನು ಪ್ರವೇಶಿಸಿ ಭಗ್ನಗೊಳಿಸುತ್ತಿರುವವರಿಗೆ ಕ್ಷಮೆ ಇಲ್ಲ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಕೂಳೂರಿನಲ್ಲಿ ನಾಗ ಮೂಲಸ್ಥಾನ ವಿಗ್ರಹಕ್ಕೆ ಹಾನಿಗೊಳಿಸಿದ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೂ ಪೂಜಾ ಸ್ಥಳಗಳನ್ನು ಭಗ್ನಗೊಳಿಸುವ ಮೂಲಕ ಕ್ಷೇತ್ರದಲ್ಲಿ ಕೋಮು ಭಾವನೆ ಕೆರಳಿಸುವವರ ವಿರುದ್ದ ವಿಶೇಷ ಕಾರ್ಯಚರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದಿದ್ದಾರೆ.
ಅಲ್ಲದೆ ಧಾರ್ಮಿಕ ಭಾವನೆಗಳ ಮೂಲಕ ಕೆಣಕಿದರೆ ನಾವು ಕಾನೂನು ಮೂಲಕ ಮರೆಯಲಾಗದ ಪಾಠ ಕಲಿಸುತ್ತೇವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಕಠಿಣ ಎಚ್ಚರಿಕೆಯನ್ನು ನೀಡಿದರು.
ಕರ್ಕೇರ ನಾಗ ಮೂಲಸ್ಥಾನ ವಿಗ್ರಹ ಭಗ್ನ ಘಟನೆಯು ಬೈಕಂಪಾಡಿಯಲ್ಲಿ ನಡೆದ ಬಳಿಕ, ಕೆಲವೇ ದಿನದ ಅಂತರದಲ್ಲಿ ಇದೀಗ ಕೂಳೂರಿನಲ್ಲಿ ನಡೆದಿದೆ. ನನ್ನ ಕ್ಷೇತ್ರದಲ್ಲಿ ಕೋಮು ಸಂಘರ್ಷ ಉಂಟು ಮಾಡಲು ಷಡ್ಯಂತ್ರ್ಯ ನಡೆಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ದೇವಸ್ಥಾನ, ನಾಗಬನ,ದೈವಸ್ಥಾನಗಳು ಹಿಂದೂಗಳ ಪೂಜನೀಯ ಸ್ಥಳಗಳಾಗಿದ್ದು ಇವುಗಳನ್ನು ಧ್ವಂಸಗೊಳಿಸುವ ಷಡ್ಯಂತ್ರ್ಯವನ್ನು ಪತ್ತೆ ಹಚ್ಚಿ ಜೈಲಿಗೆ ತಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಿ ಈ ರೀತಿಯ ಹೀನ ಕೃತ್ಯ ಮಾಡುವ ಅಪರಾಧಿಗಳನ್ನು ಮಟ್ಟ ಹಾಕುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.


