Thursday, June 4, 2026
Homeಅಪರಾಧಮಂಗಳೂರು : ನಿಧಿಯ ಆಸೆಯಿಂದ ಪುರಾತನ ಹುತ್ತವನ್ನ ಕೊರೆದ ದುಷ್ಕರ್ಮಿಗಳು!

ಮಂಗಳೂರು : ನಿಧಿಯ ಆಸೆಯಿಂದ ಪುರಾತನ ಹುತ್ತವನ್ನ ಕೊರೆದ ದುಷ್ಕರ್ಮಿಗಳು!

- Advertisement -
- Advertisement -

ಕೊಣಾಜೆ: ದುಷ್ಕರ್ಮಿಗಳ ತಂಡವೊಂದು ನಿಧಿ ಇರಬಹುದು ಎಂದು ಅಂದಾಜಿಸಿ ನಾಗಬನದ ಪಕ್ಕದ ದೊಡ್ಡ ಗಾತ್ರದ ಹುತ್ತ ವೊಂದನ್ನು ಕೊರೆದು ನಿಧಿ ಶೋಧನೆ ನಡೆಸಿರುವ ಘಟನೆ ಇರಾ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಈ ನಾಗಬನವು ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ನಾಗಬನ ಎಂದು ಹೇಳಲಾಗುತ್ತಿದ್ದು, ಇಲ್ಲಿ ನಾಗನಕಟ್ಟೆಯನ್ನೂ ಕಟ್ಟಲಾಗಿದೆ. ಆದರೆ ದುಷ್ಕರ್ಮಿಗಳು ಹುತ್ತದ ಬಳಿ ಬಿಲ ಕೊರೆದು ಶೋಧನೆ ನಡೆಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ದುಷ್ಕರ್ಮಿಗಳ ತಂಡ ಈಗಾಗಲೇ ಕೊರೆದಿರುವ ಹುತ್ತದ ಬಳಿ ನಿಧಿ ಇದೆ ಎಂಬುದನ್ನು ಹಿಂದಿನ ಕಾಲದಿಂದಲೂ ಹಿರಿಯರು ಹೇಳುತ್ತಿದ್ದರು ಎನ್ನಲಾಗಿದೆ. ಇದರ ದುರಾಸೆಯಿಂದ ನಿಧಿ ಶೋಧ ನಡೆಸಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!