Wednesday, June 24, 2026
Homeಅಪರಾಧವ್ಯಕ್ತಿಯೋರ್ವ ಕಾಣೆಯಾದ ಪ್ರಕರಣ; ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಟ್ಯಾಂಕ್‌ ನೊಳಗೆ ಪತ್ತೆ

ವ್ಯಕ್ತಿಯೋರ್ವ ಕಾಣೆಯಾದ ಪ್ರಕರಣ; ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಟ್ಯಾಂಕ್‌ ನೊಳಗೆ ಪತ್ತೆ

- Advertisement -
- Advertisement -

ಮಂಗಳೂರು: ಸುರತ್ಕಲ್ ಗ್ರಾಮದ ಮುಕ್ಕ ರೋಹನ್ ಎಸ್ಟೇಟ್ ಎಂಬ ಲೇಔಟ್‌ ನಿಂದ ವ್ಯಕ್ತಿಯೋರ್ವ ಕಾಣೆಯಾಗಿದ್ದಾನೆಂದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಂದು ತಿಂಗಳ ಬಳಿಕ ಆತನ ದೇಹ ಕೊಳೆಯ ಸ್ಥಿತಿಯಲ್ಲಿ ಟ್ಯಾಂಕೊಂದರಲ್ಲಿ ಪತ್ತೆಯದ ಘಟನೆ ನಡೆದಿದೆ.

ಪ್ರಕರಣದ ವಿವರ: ದಿನಾಂಕ: 24-06-2025 ರಂದು ರಾತ್ರಿ 9 ಗಂಟೆ ಬಳಿಕ ಸುರತ್ಕಲ್ ಗ್ರಾಮದ ಮುಕ್ಕ ರೋಹನ್ ಎಸ್ಟೇಟ್ ಎಂಬ ಹೆಸರಿನ ಲೇಔಟ್ ನಿಂದ ಮುಖೇಶ್ ಮಂಡಲ್, ಪ್ರಾಯ 27 ವರ್ಷ, ತಂದೆ: ಭುದೇವ್ ಮಂಡಲ್, ವಾಸ: ಪರಂಪುರ್, ರತುವಾ, ಮಾಲ್ಡಾ ಜಿಲ್ಲೆ, ಪಶ್ಚಿಮ ಬಂಗಾಳ ರಾಜ್ಯ ಎಂಬಾತನು ಕಾಣೆಯಾದ ಬಗ್ಗೆ ಆತನ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳದ ವಾಸಿ ದೀಪಾಂಕರ್ ಎಂಬವರು ನೀಡಿದ ದೂರಿನಂತೆ ದಿನಾಂಕ: 02.07.2025 ರಂದು ಸುರತ್ಕಲ್ ಠಾಣೆಯಲ್ಲಿ ಅ.ಕ್ರ 83/2025 ಕಲಂ ಮನುಷ್ಯ ಕಾಣೆ ರಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ದಿನಾಂಕ: 21-08-2025 ರಂದು ಬೆಳಿಗ್ಗೆ 10:00 ಗಂಟೆಗೆ ಸುರತ್ಕಲ್ ಗ್ರಾಮದ ಮುಕ್ಕ ರೋಹನ್ ಎಸ್ಟೇಟ್ ಎಂಬ ಹೆಸರಿನ ಲೇಔಟ್ ನೊಳಗೆ ಕೂಲಿ ಕೆಲಸ ಮಾಡಿಕೊಂಡಿದ್ದ ಕಾಣೆಯಾದ ಮುಖೇಶ್ ಮಂಡಲ್ ನ ಮೃತ ದೇಹವು STP ಟ್ಯಾಂಕ್ ನೊಳಗೆ ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿರುತ್ತದೆ. ಮೃತ ಮುಖೇಶ್ ಮಂಡಲ್ ನನ್ನು ಲಕ್ಷ್ಮಣ್ ಮಂಡಲ್ @ ಲಖನ್ ನು ಕೊಲೆ ಮಾಡಿ STP ಟ್ಯಾಂಕ್ ಗೆ ಹಾಕಿ, STP ಟ್ಯಾಂಕ್ ನ ಮುಚ್ಚಳವನ್ನು ಪ್ಲೈವುಡ್ ನ ಶೀಟ್ ನ್ನು ಹಾಕಿ ಮುಚ್ಚಿ ಕೊಲೆಯನ್ನು ಮರೆ ಮಾಚಿರುವ ಬಗ್ಗೆ ಚೇತನ್ ಎಂಬವರು ನೀಡಿದ ದೂರಿನಂತೆ ದಿನಾಂಕ: 21.08.2025 ರಂದು ಸುರತ್ಕಲ್ ಠಾಣೆಯಲ್ಲಿ ಅ.ಕ್ರ: 109/2025 ಕಲಂ 103 (1), 238 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿರುವುದಾಗಿದೆ.

ಸದ್ರಿ ಪ್ರಕರಣದಲ್ಲಿ ಕೊಲೆ ಮಾಡಿದ ಲಕ್ಷ್ಮಣ್ ಮಂಡಲ್ @ ಲಖನ್ ನ ಪತ್ತೆಯ ಠಾಣಾ ಪಿಎಸ್.ಐ ಶಶಿಧರ ಶೆಟ್ಟಿ ಹಾಗೂ ಎಎಸ್.ಐ ರಾಜೇಶ್ ಆಳ್ವಾ ರವರ ತಂಡವನ್ನು ರಚಿಸಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಕಳುಹಿಸಿಕೊಡಲಾಗಿರುತ್ತದೆ. ಪಿಎಸ್ಐ ಶಶಿಧರ ಶೆಟ್ಟಿ ರವರ ತಂಡ ಲಕ್ಷ್ಮಣ್ ಮಂಡಲ್ @ ಲಖನ್ ಪ್ರಾಯ 30 ವರ್ಷ, ತಂದೆ: ಬಿನಯ್ ಮಂಡಲ್, ವಾಸ: ಬಾದೋ ಗ್ರಾಮ, ರತ್ವಾ ಪೊಲೀಸ್ ಠಾಣೆ, ಮಾಲ್ಡಾ ಜಿಲ್ಲೆ, ಪಶ್ಚಿಮ ಬಂಗಾಳ ರಾಜ್ಯ ಎಂಬಾತನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ ಸಮಯ ಲಕ್ಷ್ಮಣ್ ಮಂಡಲ್ @ ಲಖನ್ ನು ದಿನಾಂಕ: 24.06.2025 ರಂದು ರಾತ್ರಿ 9:00 ಗಂಟೆಗೆ ಮುಕ್ಕ ದ ರೋಹನ್ ಎಸ್ಟೇಟ್ ನ ಲೇಔಟ್ ನಲ್ಲಿ ನಿರ್ಮಾಣ ಹಂತದ ಕಟ್ಟಡದೊಳಗೆ ಲಕ್ಷ್ಮಣ್ ಮಂಡಲ್ @ ಲಖನ್ ಹಾಗೂ ಮುಖೇಶ್ ಮಂಡಲ್ ರವರು ಮಧ್ಯಪಾನವನ್ನು ಮಾಡುತ್ತಿರುವ ಸಮಯ ಮುಖೇಶ್ ಮಂಡಲ್ ನು ಆರೋಪಿಯ ಪತ್ನಿಯ ಅಶ್ಲೀಲ ವೀಡಿಯೋ ಗಳನ್ನು ಸಂಗ್ರಹಿಸಿ ಮೊಬೈಲ್ ನಲ್ಲಿ ಇಟ್ಟು ತೋರಿಸಿದ್ದರಿಂದ ಕೋಪಗೊಂಡ ಆರೋಪಿ ಲಕ್ಷ್ಮಣ್ ಮಂಡಲ್ @ ಲಖನ್ ನು ಕೊಲೆ ಮಾಡುವ ಉದ್ದೇಶದಿಂದ ಪಕ್ಕದ ರೂಮಿನಲ್ಲಿದ್ದ ಕಬ್ಬಿಣದ ಸರಳನ್ನು ತೆಗೆದುಕೊಂಡು ತಲೆಗೆ ಹೊಡೆದು ಕೊಲೆ ಮಾಡಿ ಕೊಲೆಯನ್ನು ಮರೆ ಮಾಚಲು ಮೃತ ಶರೀರವನ್ನು ಅಲ್ಲೆ ಇದ್ದ STP ಟ್ಯಾಂಕ್ ನೊಳಗೆ ಹಾಕಿರುವುದಾಗಿ ತಪ್ಪೊಪ್ಪಿಕೊಂಡಂತೆ ದಿನಾಂಕ: 04.09.2025 ರಂದು ಠಾಣೆಯಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿ ಲಕ್ಷ್ಮಣ್ ಮಂಡಲ್ @ ಲಖನ್ ನನ್ನು 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ.

ಆರೋಪಿ ಲಕ್ಷ್ಮಣ್ ಮಂಡಲ್ @ ಲಖನ್ ನ ಮೇಲೆ ಪಶ್ಚಿಮ ಬಂಗಾಳ ರಾಜ್ಯದ ರತುವಾ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.

ಸದ್ರಿ ಪ್ರಕರಣದ ಆರೋಪಿತರ ಪತ್ತೆಯ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತರು (ಉತ್ತರ ಉಪ ವಿಭಾಗ) ಶ್ರೀ ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ, ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಪ್ರಮೋದ್ ಕುಮಾರ್ ಪಿ ರವರ ನೇತೃತ್ವದಲ್ಲಿ ಪಿಎಸ್ಐ ಗಳಾದ ರಘುನಾಯಕ, ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್.ಐ ರವರಾದ ರಾಜೇಶ್ ಆಳ್ವಾ, ತಾರನಾಥ, ಹಾಗೂ ಸಿಬ್ಬಂದಿಯವರಾದ ಅಣ್ಣಪ್ಪ, ಉಮೇಶ್ ಕುಮಾರ್, ರಾಜೇಂದ್ರ ಪ್ರಸಾದ್, ಕಾರ್ತೀಕ್, ಮೋಹನ್ ಮತ್ತು ನಾಗರಾಜ್ ರವರು ಆರೋಪಿ ಪತ್ತೆಯ ಬಗ್ಗೆ ಹಾಗೂ ತನಿಖೆಯ ಬಗ್ಗೆ ಭಾಗವಹಿಸಿರುತ್ತಾರೆ.

- Advertisement -

Latest News

error: Content is protected !!