- Advertisement -
![]()
- Advertisement -
ಬೆಳ್ತಂಗಡಿ: ಸಿಯೋನ್ ಆಶ್ರಮ ಗಂಡಿಬಾಗಿಲು ಇಲ್ಲಿ ದಿನಾಂಕ:05.09.2025ರಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಾಂಪ್ರದಾಯಿಕವಾಗಿ ಪೂಕಳಂ ಹಾಕಲಾಯಿತು. ಸಂಸ್ಥೆಯ ಟ್ರಸ್ಟೀ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ.ಯವರು ಪುಣಾಣಿಗಳೊಂದಿಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಮ್ಯಾನೇಜಿಂಗ್ ಟ್ರಸ್ಟೀಯವರಾದ ಶ್ರೀಯುತ ಡಾ.ಯು.ಸಿ.ಪೌಲೋಸ್ ರವರು ಓಣಂ ಹಬ್ಬದ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಈ ಹಬ್ಬಕ್ಕೆ ಸಿಯೋನ್ ಸಂಸ್ಥೆಯ ಆಡಳಿತ ವರ್ಗದವರು, ಕುಟುಂಬಸ್ಥರು, ಹಿತೈಷಿಗಳು, ಸಿಬ್ಬಂದಿವರ್ಗದವರು ಆಶ್ರಮನಿವಾಸಿಗಳು ಉಪಸ್ಥಿತರಿದ್ದರು. ಸಾಂತ್ವನಂ ಕುವೈಟ್ ಇವರ ವತಿಯಿಂದ ಓಣಂ ಸದ್ಯದ ವ್ಯವಸ್ಥೆ ಮಾಡಲಾಗಿತ್ತು.
- Advertisement -


