Thursday, June 4, 2026
Homeಕರಾವಳಿಉಡುಪಿಉಡುಪಿ: ನಾಪತ್ತೆಯಾಗಿದ್ದ ಯುವಕನ ಮೃತದೇಹದ ಅಸ್ಥಿಪಂಜರ 9 ತಿಂಗಳ ಬಳಿಕ ಪತ್ತೆ

ಉಡುಪಿ: ನಾಪತ್ತೆಯಾಗಿದ್ದ ಯುವಕನ ಮೃತದೇಹದ ಅಸ್ಥಿಪಂಜರ 9 ತಿಂಗಳ ಬಳಿಕ ಪತ್ತೆ

- Advertisement -
- Advertisement -

ಉಡುಪಿ: ನಾಪತ್ತೆಯಾಗಿದ್ದ ಯುವಕನ ಮೃತದೇಹದ ಅಸ್ಥಿಪಂಜರ 9 ತಿಂಗಳ ಬಳಿಕ ಪತ್ತೆಯಾಗಿರುವ ಘಟನೆ ಉಡುಪಿ ಹಿರಿಯಡ್ಕದಲ್ಲಿ ನಡೆದಿದೆ. ಮೃತರನ್ನು ಪೆರ್ಡೂರು ಪಕ್ಕಾಲು ನಿವಾಸಿ ಮಂಜುನಾಥ ಆಚಾರಿ ಎಂಬವರ ಮಗ ನಾಗರಾಜ್ (30) ಎಂದು ಗುರುತಿಸಲಾಗಿದೆ.

ಇವರು 2021ರ ಆಗಸ್ಟ್ ತಿಂಗಳಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಳಿಕ ಅವರನ್ನು ಎಲ್ಲಾ ಕಡೆ ಹುಡುಕಾಡಿ ದರೂ ಪತ್ತೆಯಾಗಿರಲಿಲ್ಲ. ಮೇ 7ರಂದು ಸಂಜೆ  ಚೌಂಡಿ ನಗರದ ಕೇಶವ ಹೆಗ್ಡೆಯವರ ಹಾಡಿಯಲ್ಲಿ ತಲೆ ಬುರುಡೆ ಮತ್ತು ಎಲುಬುಗಳು ಹಾಗೂ ಕಪ್ಪುಬಣ್ಣದ ಪ್ಯಾಂಟ್ ಮತ್ತು 2 ಖಾಲಿ ಪ್ಲಾಸ್ಟಿಕ್ ಬಾಟಲುಗಳು ಪತ್ತೆಯಾಗಿದ್ದವು. ಈ ಕುರಿತು ನಾಗರಾಜ್ ಆಚಾರ್ಯರ ಮನೆಯವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಬಟ್ಟೆ ಹಾಗೂ ಚಪ್ಪಲಿ ಮೂಲಕ ಇವು ನಾಗರಾಜ್ ಆರ್ಚಾಯರ ಮೃತದೇಹ ಎಂಬುದನ್ನು ದೃಢಪಡಿಸಿದ್ದಾರೆ.

ಇವರು ತಾನು ತೆಗೆದುಕೊಂಡು ಹೋದ ಹಗ್ಗದಿಂದ ನೇಣು ಬಿಗಿದುಕೊಂಡು ಅಥವಾ ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ನಾಗರಾಜ್ ಆಚಾರ್ಯ ಸಾಲದ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಇತರ ಕಾರಣದಿಂದ ಮೃತಪಟ್ಟಿರಬಹುದೆಂದು ಸಂಶಯ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!