Sunday, June 7, 2026
Homeಕರಾವಳಿಕಾಸರಗೋಡು;ನಾಪತ್ತೆಯಾಗಿದ್ದ ಬಾಲಕನ ಮೃತದೇಹ ರೈಲು ಹಳಿಯಲ್ಲಿ ಪತ್ತೆ

ಕಾಸರಗೋಡು;ನಾಪತ್ತೆಯಾಗಿದ್ದ ಬಾಲಕನ ಮೃತದೇಹ ರೈಲು ಹಳಿಯಲ್ಲಿ ಪತ್ತೆ

- Advertisement -
- Advertisement -

ಕಾಸರಗೋಡು; ನಾಪತ್ತೆಯಾಗಿದ್ದ ಬಾಲಕನ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿರುವ ಘಟನೆ ಪಲ್ಲಿಕೆರೆ ಪೂಚೆಕ್ಕಾಡ್ ಬಳಿ ನಡೆದಿದೆ.ತೆಕ್ಕುಪುರಂ ನಿವಾಸಿ ಸುಬೈರ್ ಮತ್ತು ಸಮೀರಾ ದಂಪತಿಯ ಪುತ್ರ ಮಹಮ್ಮದ್ ಶಹೀಮ್ ಮೃತ ಬಾಲಕ.

ಶಹೀಮ್ ಬುಧವಾರ ಶಾಲೆಯಿಂದ ಬೇಗನೇ‌ ಬಂದಿದ್ದ. ಆದರೆ ಮನೆಗೆ ತೆರಳಿರಲಿಲ್ಲ. ಸಂಜೆ ಶಾಲಾ ಸಮಯ‌ ಕಳೆದರೂ‌ ಮಗು ಮನೆಗೆ ಬಾರದಿದ್ದಾಗ ಪೋಷಕರು ವಿಚಾರಿಸಿದ್ದಾರೆ.ಈ ವೇಳೆ‌ ಶಹೀಮ್‌ ಶಾಲೆಯಿಂದ ಮಧ್ಯಾಹ್ನ‌ ತೆರಳಿರುವ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದ್ದಾರೆ. ಬಳಿಕ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ರೈಲ್ವೇ ಹಳಿಯಲ್ಲಿ‌ ಬಾಲಕನ ಮೃತದೇಹ ಪತ್ತೆಯಾಗಿದೆ.

- Advertisement -

Latest News

error: Content is protected !!