Thursday, June 4, 2026
Homeತಾಜಾ ಸುದ್ದಿಮಂಗಳೂರು: ಸಚಿವ ಸುನಿಲ್‌ ಕುಮಾರ್‌ ಬಿಲ್ಲವ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ: ಪ್ರಣವಾನಂದ ಸ್ವಾಮೀಜಿ

ಮಂಗಳೂರು: ಸಚಿವ ಸುನಿಲ್‌ ಕುಮಾರ್‌ ಬಿಲ್ಲವ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ: ಪ್ರಣವಾನಂದ ಸ್ವಾಮೀಜಿ

- Advertisement -
- Advertisement -

ಮಂಗಳೂರು: ಸಿಎಂ ಬೊಮ್ಮಾಯಿ ಹಾಗೂ ಸಚಿವ ಸುನಿಲ್ ಕುಮಾರ್ ಇಬ್ಬರೂ ಷಡ್ಯಂತ್ರ ಮಾಡಿಕೊಂಡು ಈಡಿಗ ಬಿಲ್ಲವ ಸಮುದಾಯಕ್ಕೆ ವಂಚಿಸುತ್ತಿದ್ದಾರೆ ಎಂದು ಕಲಬುರಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು

ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,500 ಕೋಟಿ ರೂ. ಅನುದಾನದಲ್ಲಿ ಬಿಲ್ಲವ ನಿಗಮ ಮಂಡಳಿ ಸ್ಥಾಪಿಸಲು‌ ಬೇಡಿಕೆಯಿಟ್ಟಿದ್ದವು. ಆದ್ರೆ ಬಿಲ್ಲವ ನಿಗಮ ಮಂಡಳಿ ಸ್ಥಾಪನೆ ಮಾಡದೆ ಕೇವಲ 5 ಕೋಟಿ ರೂ. ಅನುಮಾನದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ಈಡಿಗ ಬಿಲ್ಲವ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸಚಿವ ಸುನಿಲ್ ಕುಮಾರ್, ಸಮುದಾಯವನ್ನು ಸಂಪೂರ್ಣ ದಾರಿ ತಪ್ಪಿಸುತ್ತಿದ್ದಾರೆ. ಬರೀ ತಮ್ಮ ರಾಜಕೀಯ ಲಾಭಕ್ಕೆ ಬಿಲ್ಲವ ಸಮುದಾಯವನ್ನು ಬಲಿ ಕೊಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಲ್ಲವ ಸಮುದಾಯದ ಪ್ರತಿಯೊಂದು ಮನೆಗೂ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಮಾಡಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.

- Advertisement -

Latest News

error: Content is protected !!