Thursday, June 4, 2026
Homeಕರಾವಳಿಉಡುಪಿಹೆಬ್ರಿ: ಚಾರ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಅಗ್ನಿ ಅವಘಡ: ಸುಟ್ಟು ಬೂದಿಯಾದ ದಾಖಲೆ ಪತ್ರಗಳು

ಹೆಬ್ರಿ: ಚಾರ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಅಗ್ನಿ ಅವಘಡ: ಸುಟ್ಟು ಬೂದಿಯಾದ ದಾಖಲೆ ಪತ್ರಗಳು

- Advertisement -
- Advertisement -

ಬ್ರಹ್ಮಾವರ: ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ತಡರಾತ್ರಿ ಆಕಸ್ಮಿಕ ಬೆಂಕಿ ಸಂಭವಿಸಿದ್ದು, ಹೆಬ್ರಿಯ ಚಾರ ಗ್ರಾಮ ಪಂಚಾಯತ್ ಕಟ್ಟಡದಲ್ಲಿದ್ದ ದಾಖಲೆಗಳೆಲ್ಲಾ ಸುಟ್ಟು ಹೋಗಿದ್ದು, ಭಾರೀ ನಷ್ಟ ಸಂಭವಿಸಿದೆ.

ಬೆಳಗ್ಗೆ ಸ್ಥಳೀಯರು ಪಂಚಾಯತ್ ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ಕಂಡ ಕೂಡಲೇ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಧ್ಯಕ್ಷೆ ಕುಸುಮಾ ಪ್ರಭು ಹಾಗೂ ಸಿಬ್ಬಂದಿ ಪಂಚಾಯತ್ ನ ಬಾಗಿಲನ್ನು ತೆರೆದು ನೋಡಿದಾಗ ಕಟ್ಟಡದ ಒಳಗಡೆಯಿರುವ ರೆಕಾರ್ಡ್ ರೂಮಿನಲ್ಲಿ ಬೆಂಕಿ ಉರಿಯುತ್ತಿದ್ದುದ್ದನ್ನ ಕಂಡು ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಿದ್ದಾರೆ.  ಆದ್ರೆ ಕಟ್ಟಡದೊಳಗಿದ್ದ ದಾಖಲೆ ಪತ್ರಗಳು, ಪೀಠೋಪಕರಣಗಳೆಲ್ಲಾ ಸುಟ್ಟು ಭಸ್ಮವಾಗಿವೆ.

- Advertisement -

Latest News

error: Content is protected !!