Thursday, June 4, 2026
Homeತಾಜಾ ಸುದ್ದಿಕೊಲೆಗಡುಕರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ: ಅಮಾಯಕರನ್ನು ಕೊಂದವರ ಎನ್‌ಕೌಂಟರ್‌ಗೂ ಸರ್ಕಾರ ಸಿದ್ಧ: ಅಶ್ವತ್ಥನಾರಾಯಣ

ಕೊಲೆಗಡುಕರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ: ಅಮಾಯಕರನ್ನು ಕೊಂದವರ ಎನ್‌ಕೌಂಟರ್‌ಗೂ ಸರ್ಕಾರ ಸಿದ್ಧ: ಅಶ್ವತ್ಥನಾರಾಯಣ

- Advertisement -
- Advertisement -

ರಾಮನಗರ: ಕಳೆದ ಹತ್ತು ದಿನಗಳಿಂದ ಮಂಗಳೂರಿನಲ್ಲಿ ಒಂದರ ಹಿಂದೊಂದರಂತೆ ಅಮಯಾಕರ ಕೊಲೆಗಳು ನಡೆಯುತ್ತಿವೆ. ಇದು ರಾಜ್ಯಾದ್ಯಂತ ಉದ್ವಿಗ್ನ ಪರಿಸ್ಥಿತಿಯನ್ನುಂಡು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥ ನಾರಾಯಣ, ಅಮಾಯಕರ ಕೊಂದವರ ವಿರುದ್ಧ ಎನ್‌ಕೌಂಟರ್ ಸೇರಿದಂತೆ ಯಾವುದೇ ಕಠಿಣ ಕ್ರಮಕ್ಕೆ ಸರ್ಕಾರ ಸಿದ್ಧವಿದೆ ಹೇಳಿದರು.

ರಾಮನಗರದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಕೊಲೆಗಡುಕರು, ದುಷ್ಕರ್ಮಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ  ತನಿಖೆಗೆ ತಂಡಗಳನ್ನು ರಚಿಸಲಾಗಿದೆ. ಅಮಾಯಕರ ಜೀವ ರಕ್ಷಣೆ ನಮ್ಮ‌ ಕರ್ತವ್ಯ ಎಂದರು.

ಬಿಜೆಪಿ ಕಾರ್ಯಕರ್ತರ ಆಕ್ರೋಶ ಈ ಸಂದರ್ಭದಲ್ಲಿ ಸಹಜ. ಈಗಾಗಲೇ ಸಂಬಂಧಿಸಿದವರನ್ನು ಬಂಧಿಸಲಾಗಿದೆ. ಸರ್ಕಾರ ಹಾಗೂ ಗೃಹ ಸಚಿವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರ ಭಾವನೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತೇವೆ. ಯು.ಪಿ.ಮಾದರಿ ಅಲ್ಲ, ಅದಕ್ಕಿಂತ ಐದು ಹೆಜ್ಜೆ ಮುಂದೆ ಹೋಗಿ ಕ್ರಮ ಕೈಗೊಳ್ಳುತ್ತೇವೆ. ಅದರಲ್ಲೂ ಯಾವುದೇ ಮುಲಾಜು ಇಲ್ಲ ಎಂದು ಸ್ಪಷ್ಟಪಡಿಸಿದರು.

- Advertisement -

Latest News

error: Content is protected !!