Friday, June 5, 2026
Homeಕರಾವಳಿಉಡುಪಿಉಡುಪಿ: ಬೈಂದೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ

ಉಡುಪಿ: ಬೈಂದೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ

- Advertisement -
- Advertisement -

ಉಡುಪಿ: ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಯುವಕನೋರ್ವನಿಗೆ ಇರಿದಿರುವ ಘಟನೆ ಬೈಂದೂರು ತಾಲೂಕಿನ ನಂದನವನದಲ್ಲಿ ನಡೆದಿದೆ.

ಪ್ರಸನ್ನ ಎಂಬ ಯುವಕನಿಗೆ ಇರಿಯಲಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಬುಧವಾರ ರಾತ್ರಿ ಸ್ನೇಹಿತ ಮನೋಜ್ ಖಾರ್ವಿ ಜೊತೆ ಪ್ರಸನ್ನ ಊಟಕ್ಕೆ ತೆರಳಿದ್ದ ವೇಳೆ ಹೋಟೆಲ್ ಹೊರಗೆ ಇದ್ದ ಸುದರ್ಶನ ಎಂಬಾತನ ಜೊತೆ ಜಗಳ ನಡೆದಿದೆ.

ಪರಸ್ಪರ ವಾಗ್ವಾದ, ನಿಂದನೆ ನಡೆದು
ಚೂರಿಯಿಂದ ಪ್ರಸನ್ನ ಮೇಲೆ ಹಲ್ಲೆ ಮಾಡಿದ ಸುದರ್ಶನ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾನೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!