Saturday, June 13, 2026
Homeಮನರಂಜನೆಮತ್ತೆ ಹುಟ್ಟಿ ಬಂದ ಚಿರಂಜೀವಿ ಸರ್ಜಾ: ಗಂಡು ಮಗುವಿನ ತಾಯಿಯಾದ ಮೇಘನಾ ರಾಜ್

ಮತ್ತೆ ಹುಟ್ಟಿ ಬಂದ ಚಿರಂಜೀವಿ ಸರ್ಜಾ: ಗಂಡು ಮಗುವಿನ ತಾಯಿಯಾದ ಮೇಘನಾ ರಾಜ್

- Advertisement -
- Advertisement -

ಬೆಂಗಳೂರು : ಅಭಿಮಾನಿಗಳು ಬಹು ದಿನದಿಂದ ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ. ನಟಿ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ನಿನ್ನೆ ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ಮೇಘನಾ ದಾಖಲಾಗಿದ್ದರು. ಇಂದು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ಸರ್ಜಾ ಕುಟುಂಬದಲ್ಲಿ ಸಂಭ್ರಮ ಮೂಡಿಸಿದೆ. ಇಂದು ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಮೇಘನಾ ಮಗುವಿಗೆ ಜನ್ಮ ನೀಡಿದ್ದಾರೆ.

ಇನ್ನು ಇವತ್ತು ವಿಶೇಷವಾದ ದಿನ. ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ನಿಶ್ಚಿತಾರ್ಥವಾದ ದಿನ. 2017 ಅಕ್ಟೋಬರ್ 22 ರಂದು ಇವರಿಬ್ಬರ ಎಂಗೇಜ್ ಮೆಂಟ್ ಆಗಿತ್ತು. ಇದೇ ದಿನ ಮಗುವಿಗೆ ಜನ್ಮ ನೀಡಿದ್ದಾರೆ ಮೇಘನಾ ರಾಜ್. ಇನ್ನು ಈಗಾಗಲೇ ಸರ್ಜಾ ಕುಟುಂಬ ಆಸ್ಪತ್ರೆಗೆ ಆಗಮಿಸಿದ್ದು ಸಂಭ್ರಮದಲ್ಲಿದ್ದಾರೆ. ಮತ್ತೊಂದು ಕಡೆ ಅಭಿಮಾನಿಗಳು ಕೂಡ ಚಿರು ಮತ್ತೆ ಹುಟ್ಟಿ ಬಂದಿದ್ದಾರೆ ಅಂತಾ ಫುಲ್ ಖುಷಿಯಾಗಿದ್ದಾರೆ.

- Advertisement -

Latest News

error: Content is protected !!