Saturday, May 18, 2024
Homeತಾಜಾ ಸುದ್ದಿವಧು ಎಂದು ಕೆಲಸದವಳ ಜೊತೆ ಮದುವೆ ಮಾಡಿಸಿದ ಬ್ರೋಕರ್: ಫೋನ್ ನಿಂದ ಬಯಲಾಯ್ತು ಭಯಾನಕ ಸತ್ಯ

ವಧು ಎಂದು ಕೆಲಸದವಳ ಜೊತೆ ಮದುವೆ ಮಾಡಿಸಿದ ಬ್ರೋಕರ್: ಫೋನ್ ನಿಂದ ಬಯಲಾಯ್ತು ಭಯಾನಕ ಸತ್ಯ

spot_img
- Advertisement -
- Advertisement -

ರಾಜಸ್ಥಾನ: ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅನ್ನೋ ಮಾತಿದೆ. ಅದೇ ರೀತಿ ಬರೀ ಸುಳ್ಳಿನ ಅರಮನೆಯನ್ನೇ ಕಟ್ಟಿ ಬ್ರೋಕರ್ ಒಬ್ಳು ಮದುವೆ ಮಾಡಿಸಿ ಇದೀಗ ಸಿಕ್ಕಿ ಬಿದ್ದಿದ್ದಾಳೆ. ಇಂತಹ ಘಟನೆ ನಡೆದಿರೋದು  ರಾಜಸ್ಥಾನದಲ್ಲಿ.

ಇಲ್ಲಿನ ಉಮೈದ್​ ಸಿಂಗ್​ ಹೆಸರಿನ ವ್ಯಕ್ತಿ ಮದುವೆಯಾಗಲೆಂದು ವಧು ಅನ್ವೇಷಣೆಯಲ್ಲಿದ್ದ. ಈ ವೇಳೆ ಆತನಿಗೆ ಸಿಕ್ಕಿದ ಗಂಗಾ ಸಿಂಗ್​ ಹೆಸರಿನ ಬ್ರೋಕರ್​ ಮದುವೆ ಮಾಡಿಸುವುದಾಗಿ ಹೇಳಿದ್ದಾಳೆ. ಹುಡುಗಿ ಸಿದ್ಧಳಿದ್ದಾಳೆ, ಆದರೆ ಆಕೆಯ ತಂದೆಗೆ ಸ್ವಲ್ಪ ತೊಂದರೆ ಇದೆ, ಅವರಿಗೆ ನೀನು 3.5 ಲಕ್ಷ ಹಣ ಕೊಡಬೇಕು ಎಂದು ಹೇಳಿದ್ದಾಳೆ. ಅದಕ್ಕೆ ಒಪ್ಪಿದ ಆತ ಹುಡುಗಿ ಮನೆಗೆ ತೆರಳಿ ಮದುವೆಗೆ ಒಪ್ಪಿ ಬಂದಿದ್ದಾನೆ.

ಮದುವೆಗೂ ಮೊದಲು 2 ಲಕ್ಷ ಹಣವನ್ನು ಗಂಗಾ ಕೈನಲ್ಲಿ ಕೊಟ್ಟು, ವಧುವಿನ ತಂದೆಗೆ ಕೊಡಲು ಹೇಳಿದ್ದಾನೆ. ಮದುವೆ ದಿನದಂದು ಮೆರವಣಿಗೆಯೊಂದಿಗೆ ವಧುವಿನ ಮನೆಗೆ ವರ ಹೊರಟಿದ್ದಾನೆ. ಆಗ ಕರೆ ಮಾಡಿದ ಗಂಗಾ, ವಧುವಿನ ಕುಟುಂಬದಲ್ಲಿ ಯಾರೋ ಮೃತರಾಗಿದ್ದಾರೆ. ಆದ್ದರಿಂದ ನೀವು ನಮ್ಮ ಮನೆಗೆ ಬಂದು ಇಲ್ಲಿಯೇ ಮದುವೆ ಮಾಡಿಕೊಂಡು ಹೋಗಿ ಎಂದು ಹೇಳಿದ್ದಾಳೆ. ಅದರಂತೆ ಗಂಗಾ ಮನೆ ಆವರಣದಲ್ಲೇ ಮದುವೆ ಮಾಡಿಕೊಂಡು ದಂಪತಿ ವರನ ಮನೆಗೆ ತೆರಳಿದ್ದಾರೆ. ವಾಪಾಸು ತೆರಳುವಾಗ ವಧುವಿನ ತಂದೆಗೆ ಕೊಡಲೆಂದು 1.5 ಲಕ್ಷ ರೂಪಾಯಿ ಕೊಟ್ಟಿದ್ದಾನೆ.

ಬದುಕಿಗೆ ಜತೆಯಾದ ಪತ್ನಿಗೆ ಉಮೈದ್​ ಹೊಸ ಫೋನ್​ ಒಂದನ್ನು ಗಿಫ್ಟ್ ಕೊಟ್ಟಿದ್ದಾನೆ. ನಾಲ್ಕು ದಿನಗಳಾದ ಮೇಲೆ ಆಕೆಯನ್ನು ತವರು ಮನೆಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಗಂಗಾ ಮನೆಗೆ ಕರೆತಂದು ಬಿಡಲಾಗಿದೆ. ಅದಾದ ನಂತರ ಆತ ತನ್ನ ಮನೆಗೆ ವಾಪಾಸಾಗಿದ್ದಾನೆ. ಇದಾದ ನಂತರ ಮದುವೆಯಾಗಿದ್ದ ಹೆಣ್ಣು ಮಗಳು ಉಮೈದ್​ಗೆ ಕರೆ ಮಾಡಿದ್ದಾಳೆ. ‘ಗಂಗಾ ನಿಮಗೆ ಮೋಸ ಮಾಡಿದ್ದಾಳೆ. ಅವಳು ಹೇಳಿದಂತೆ ನಾನು ಮದುವೆಗೆ ಸಿದ್ಧವಿದ್ದ ಹೆಣ್ಣಲ್ಲ. ನಾನು ಮದುವೆ ಮನೆಗಳಲ್ಲಿ ರೊಟ್ಟಿ ಮಾಡುವ ಕೆಲಸ ಮಾಡುತ್ತಿದ್ದೆ. ಅಲ್ಲಿಗೆ ಬಂದ ಗಂಗಾ ನನ್ನನ್ನು ಮದುವೆಯಾಗುವಂತೆ ಬೆದರಿಕೆ ಹಾಕಿ ಈ ರೀತಿ ನಾಟಕ ಮಾಡಿಸಿದಳು. ನೀವು ಮೋಸ ಹೋಗಿದ್ದೀರಿ’ ಎಂದು ಹೇಳಿದ್ದಾಳೆ.

ನನ್ನ ಬಳಿ ಫೋನ್​ ಇಲ್ಲದಿದ್ದರಿಂದ ಈ ವಿಚಾರ ನಿಮಗೆ ಹೇಳಲಾಗಲಿಲ್ಲ. ಅದಕ್ಕೆ ಈಗ ತಿಳಿಸುತ್ತಿದ್ದೇನೆ ಎಂದೂ ತಿಳಿಸಿದ್ದಾಳೆ. ಈ ವಿಚಾರವನ್ನು ಕೇಳಿದ ಉಮೈದ್​ ಶಾಕ್​ ಆಗಿದ್ದಾನೆ. ಹೆಂಡತಿ ಎಂದು ಪ್ರೀತಿಯಿಂದ ಆದರಿಸಿದ್ದ ಮಹಿಳೆ ಇದೀಗ ತನ್ನ ಊರಿಗೆ ತೆರಳಿ ನಿತ್ಯದ ಕೆಲಸಕ್ಕೆ ಮರಳಿದ್ದಾಳೆ. ಮದುವೆ ಹೆಸರಿನಲ್ಲಿ ಗಂಗಾ 3.5 ಲಕ್ಷ ದೋಚಿದ್ದಾಳೆ. ಇದೀಗ ಅತ್ತ ಹೆಂಡತಿಯೂ ಇಲ್ಲ ಇತ್ತ ದುಡ್ಡೂ ಇಲ್ಲದೇ ಉಮೈದ್ ಕಂಲಾಗಿದ್ದು, ಈ ವಿಚಾರವಾಗಿ ಉಮೈದ್​ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ.

- Advertisement -
spot_img

Latest News

error: Content is protected !!