- Advertisement -
![]()
- Advertisement -
ವಿಟ್ಲ: ಒಂಟಿ ಮಹಿಳೆ ಮನೆಯಲ್ಲಿದ್ದ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ, ಚಿನ್ನಾಭರಣಗಳನ್ನು ದೋಚಿದ ಘಟನೆ ಇಂದು ಮಧ್ಯಾಹ್ನ ವಿಟ್ಲ ಸಮೀಪದ ಕಾಂತಡ್ಕದಲ್ಲಿ ನಡೆದಿದೆ.
ಕಾಂತಡ್ಕ ಜುಮಾ ಮಸೀದಿ ಮುಂಭಾಗದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಆಟೋ ಚಾಲಕ ರಫೀಕ್ ಇಂದು ಶುಕ್ರವಾರವಾದ ಹಿನ್ನೆಲೆ ಮಸೀದಿಗೆ ತೆರಳಿದ್ದರು. ಅವರ ಜೊತೆಗೆ 10 ವರ್ಷದ ಅವರ ಮಗ ಕೂಡ ತೆರಳಿದ್ದ. ಅವರ ಪತ್ನಿ ಜೈನಾಬಿ ಅವರು ಒಬ್ಬರೇ ಮನೆಯಲ್ಲಿದ್ದರು. ಈ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅವರನ್ನು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ದರೋಡೆ ಮಾಡಿದ್ದಾರೆ. ಅಲ್ಲದೇ ಹಲ್ಲೆ ಕೂಡ ನಡೆಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
- Advertisement -


