Sunday, June 7, 2026
Homeಕರಾವಳಿದಕ್ಷಿಣಕನ್ನಡ ಜಿಲ್ಲೆಯ ಯುವಜನತೆಗೆ ಭರ್ಜರಿ ಆಫರ್ ಕೊಟ್ಟ ಮಂಗಳೂರು ಪೊಲೀಸ್ ಕಮೀಷನರ್

ದಕ್ಷಿಣಕನ್ನಡ ಜಿಲ್ಲೆಯ ಯುವಜನತೆಗೆ ಭರ್ಜರಿ ಆಫರ್ ಕೊಟ್ಟ ಮಂಗಳೂರು ಪೊಲೀಸ್ ಕಮೀಷನರ್

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯ ಯುವ ಜನತೆಗೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಭರ್ಜರಿ ಆಫರ್ ಒಂದನ್ನು ಕೊಟ್ಟಿದ್ದಾರೆ. ನೀವು ಪೊಲೀಸ್, ಇನ್ಸ್ ಪೆಕ್ಟರ್ ಆಗೋದಕ್ಕೆ ಬಯಸುವವರಿಗೆ ಒಂದು ತಿಂಗಳ ಕಾಲ ಉಚಿತವಾಗಿ ತರಬೇತಿ ನೀಡುವುದಾಗಿ ತಿಳಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ 100 ಮಂದಿಗೆ ಉಚಿತ ತರಬತಿ ಕಾರ್ಯಾಗಾರ ಏರ್ಪಡಿಸಿದ್ದಾರೆ. ಪಿಎಸ್ಐ,ಪೋಲೀಸ್ ಆಗಲು ಬಯಸುವವರು ದೈಹಿಕ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಅಲ್ಲದೇ ಅವರು ದಕ್ಷಿಣಕನ್ನಡದವರೇ ಆಗಿರಬೇಕು. ಇನ್ನು ತರಬೇತಿ ಕಾರ್ಯಾಗಾರದಲ್ಲಿ ಭಾಗಿಯಾಗಲು ಬಯಸುವವರಿಗೆ ಆಗಸ್ಟ್ 9ರಿಂದ ಕಮೀಷನರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಇನ್ನು ಕಾರ್ಯಾಗಾರದಲ್ಲಿ ಭಾಗಿಯಾಗ ಬಯಸುವವರು ತಮ್ಮ ಐಡಿ ಕಾರ್ಡ್, ಪಿಎಸ್ಐ, ಪೊಲೀಸ್ ಅರ್ಹತಾ ಪರೀಕ್ಷೆಯಲ್ಲಿ ಪಾಸ್ ಆಗಿರುವ ಸರ್ಟಿಫಿಕೇಟ್ ಹೊಂದಿರಬೇಕು.

- Advertisement -

Latest News

error: Content is protected !!