Wednesday, June 3, 2026
Homeಕರಾವಳಿಬೆಳ್ತಂಗಡಿ : "ಮಾರಿ ಗುಡಿ-5" ಪೇಜ್ ನಲ್ಲಿ ಅವಹೇಳನಕಾರಿ ಪೋಸ್ಟ್ : ಬೆಳ್ತಂಗಡಿಯ ಯುವಕನನ್ನು ಬಂಧಿಸಿದ...

ಬೆಳ್ತಂಗಡಿ : “ಮಾರಿ ಗುಡಿ-5” ಪೇಜ್ ನಲ್ಲಿ ಅವಹೇಳನಕಾರಿ ಪೋಸ್ಟ್ : ಬೆಳ್ತಂಗಡಿಯ ಯುವಕನನ್ನು ಬಂಧಿಸಿದ ಮಂಗಳೂರು ಸೈಬರ್ ಕ್ರೈಂ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಸಾಮಾಜಿಕ ಜಾಲತಾಣವಾದ ಇನ್ಟಾಗ್ರಾಮ್ ನಲ್ಲಿ “ಮಾರಿಗುಡಿ -5 ” ಎಂಬ ಪೇಜ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದು ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವ ಬಗ್ಗೆ ಮಂಗಳೂರಿನ ಯುವಕನೊಬ್ಬ ಮಂಗಳೂರು ಸೈಬರ್ ಕ್ರೈಂಠಾಣೆಗೆ ದೂರು ನೀಡಿದ್ದ.

ಈ ಬಗ್ಗೆ ‌ತನಿಖೆ ನಡೆಸಿದಾಗ ಸಿಮ್ ಕಾರ್ಡ್ ಹಾಗೂ ಮೊಬೈಲ್ ವಿಳಾಸ ಹೊಂದಿರುವ ವ್ಯಕ್ತಿ ದುಬೈನಲ್ಲಿ ಉದ್ಯೋಗದಲ್ಲಿರುವುದು ಕಂಡುಬಂದಿತ್ತು. ಇದರ ಬೆನ್ನು ಹತ್ತಿದಾಗ ಸಿಮ್ ಹಾಗೂ ಮೊಬೈಲ್ ಫೋನ್ ಇನ್ನೊಬ್ಬ ಸಂಬಂಧಿ ಯುವಕ ಉಪಯೋಗಿಸುತ್ತಿರುವುದು ಎಂದು ತನಿಖೆ ನಡೆಸುತ್ತಾ ಹೋಗುತ್ತಿದ್ದಾಗ ತಿಳಿದಿತ್ತು. ಅದರ ಜಾಡು ಹಿಡಿದು ಹೊರಟಾಗ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ರೊಟ್ಟು ನಿವಾಸಿಯಾಗಿರುವ ಉಜಿರೆ ಬಸ್ ನಿಲ್ದಾಣದ ಬಳಿ ಇರುವ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಅಝ್ಮಲ್ (20) ಎಂದು ಗೊತ್ತಾಗಿದೆ.

ಬಳಿಕ ಖಚಿತ ಮಾಹಿತಿ‌ ಮೇರೆಗೆ ಉಜಿರೆಯಿಂದ ಮಹಮ್ಮದ್ ಅಝ್ಮಲ್ ನನ್ನು ವಶಕ್ಕೆ ಪಡೆದುಕೊಂಡು ಮಂಗಳೂರು ಸೈಬರ್ ಕ್ರೈಂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತಾನು ಮಾಡಿದ ಕೃತ್ಯವನ್ನು ತಪ್ಪೊಪ್ಪಿಕೊಂಡಿದ್ದು ನಂತರ ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!