Wednesday, June 3, 2026
Homeಕರಾವಳಿಉಡುಪಿಉಡುಪಿ ಲಾಡ್ಜ್ ನಲ್ಲಿ ಮೆಡಿಕಲ್ ರೆಪ್ ಆತ್ಮಹತ್ಯೆ ಪ್ರಕರಣ: ಕಾರಣ ಬಹಿರಂಗ

ಉಡುಪಿ ಲಾಡ್ಜ್ ನಲ್ಲಿ ಮೆಡಿಕಲ್ ರೆಪ್ ಆತ್ಮಹತ್ಯೆ ಪ್ರಕರಣ: ಕಾರಣ ಬಹಿರಂಗ

- Advertisement -
- Advertisement -

ಉಡುಪಿ: ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ನಡೆದಿದ್ದ ಯುವಕನ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂದು ತಿಳಿದುಬಂದಿದೆ.
ಮಂಗಳೂರಿನ ಕೊಣಾಜೆಯ ಶರಣ್ ರಾಜ್ (33) ಇಂದು ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರೇಮ ವೈಫಲ್ಯದ ಹಿನ್ನಲೆಯಲ್ಲಿ ನೇಣು ಬಿಗಿದು ಶರಣ್ ರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದು, ಯುವತಿ ಮನೆಯವರು ಪ್ರತಿರೋಧ ವ್ಯಕ್ತಪಡಿಸಿದ ಹಿನ್ನಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸೋಮವಾರ ಶಾಂಭವಿ ಲಾಡ್ಜ್ ನಲ್ಲಿ 118ನೇ ಕೊಠಡಿ ಪಡೆದಿದ್ದ ಶರಣ್ ರಾಜ್, ಇಂದು ಬೆಳಿಗ್ಗೆ ಬಾಗಿಲು ತೆಗೆಯದಿದ್ದಾಗ ಲಾಡ್ಜ್ ನಿರ್ವಾಹಕರು ಮತ್ತೊಂದು ಕೀ ಬಳಸಿ ಬಾಗಿಲು ತೆಗೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.‌

ಕೆಲವು ದಿನಗಳ ಹಿಂದೆ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ ಕಾರಣ ಎರಡು ದಿನದ ಹಿಂದಷ್ಟೇ ವಿವಿಧ ಧಾರ್ಮಿಕ ಕಾರ್ಯಗಳನ್ನು‌ ನಡೆಸಿ ಲಾಡ್ಜ್ ನ ಹೆಸರು ಬದಲಾಯಿಸಲಾಗಿತ್ತು.

- Advertisement -

Latest News

error: Content is protected !!