Saturday, August 29, 2026
Homeಕರಾವಳಿಧರ್ಮಸ್ಥಳ : ನೇತ್ರಾವತಿ ಬಳಿ‌ ಬೈಕಿಗೆ ಕಾರು ಡಿಕ್ಕಿ: ಧರ್ಮಸ್ಥಳ ಠಾಣೆಯ ಇಬ್ಬರು ಪೊಲೀಸರಿಗೆ ...

ಧರ್ಮಸ್ಥಳ : ನೇತ್ರಾವತಿ ಬಳಿ‌ ಬೈಕಿಗೆ ಕಾರು ಡಿಕ್ಕಿ: ಧರ್ಮಸ್ಥಳ ಠಾಣೆಯ ಇಬ್ಬರು ಪೊಲೀಸರಿಗೆ ಗಾಯ

- Advertisement -
- Advertisement -

ಧರ್ಮಸ್ಥಳ: ಕಾರೊಂದು ಓವರ್ ಟೆಕ್ ಮಾಡಲು ಹೋಗಿ ಬೈಕಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಧರ್ಮಸ್ಥಳ ಠಾಣೆಯ ಪೊಲೀಸರಿಬ್ಬರು ಗಾಯಗೊಂಡ ಘಟನೆ ನಡೆದಿದೆ.

ಧರ್ಮಸ್ಥಳ ಠಾಣೆಯ ಇಬ್ಬರು ಪೊಲೀಸರಾದ ಧರಿಯಪ್ಪ ಮತ್ತು ಭೀಮೇಶ್ ಧರ್ಮಸ್ಥಳ ಕಡೆಯಿಂದ ಉಜಿರೆಗೆ ತೆರಳುತ್ತಿರುವ ಸಂದರ್ಭ ಧರ್ಮಸ್ಥಳದ ನೇತ್ರಾವತಿ ಬಳಿ ತಿರುವಿನಲ್ಲಿ ವೇಗವಾಗಿ ಎದುರುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು ಬೈಕಿನಲ್ಲಿದ್ದ ಪೊಲೀಸರಿಬ್ಬರಿಗೂ ಗಾಯಗಳಾಗಿದೆ. ಅದರಲ್ಲೂ ಭೀಮೇಶ್ ಎಂಬವರ ಕಾಲು ಹಾಗೂ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ತಕ್ಷಣ ಗಾಯಾಳುಗಳನ್ನು ಉಜಿರೆಯ ಬೆನಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!