Saturday, June 6, 2026
Homeತಾಜಾ ಸುದ್ದಿಪಾವಂಜೆ: ಅಣ್ಣಪ್ಪ ಸ್ವಾಮಿಗೆ ಭಕ್ತಿಭಾವದ ನರ್ತನ ಸೇವೆ: ಜಾತ್ರಾ ಮಹೋತ್ಸವಕ್ಕೆ ತೆರೆ

ಪಾವಂಜೆ: ಅಣ್ಣಪ್ಪ ಸ್ವಾಮಿಗೆ ಭಕ್ತಿಭಾವದ ನರ್ತನ ಸೇವೆ: ಜಾತ್ರಾ ಮಹೋತ್ಸವಕ್ಕೆ ತೆರೆ

- Advertisement -
- Advertisement -

ಮುಲ್ಕಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಇಂದು ತೆರೆಬಿದ್ದಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ನಿನ್ನೆ ರಾತ್ರಿ ರಥೋತ್ಸವ ಹಾಗೂ ಶ್ರೀದೇವರ ಶಯನೋತ್ಸವ ನಡೆಯಿತು.

ಇಂದು ಪ್ರಾತಃಕಾಲ ವೇದ ಕೃಷಿಕ ಕೆ ಎಸ್ ನಿತ್ಯಾನಂದ ಹಾಗೂ ದೇವಸ್ಥಾನದ ತಂತ್ರಿಗಳಾದ ರಾಜಿ ದಿವಾಕರ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಕವಾಟೋದ್ಘಾಟನೆ, ಚೂರ್ಣೋತ್ಸವ, ತುಲಾಭಾರ ಸೇವೆ ನಡೆಯಿತು. ಸಂಜೆ ಅವಭೃತೋತ್ಸವ, ಧ್ವಜಾವರೋಹಣ ನಡೆದು ಅಣ್ಣಪ್ಪ ಸ್ವಾಮಿಗೆ ನರ್ತನ ಸೇವೆ ನಡೆಯಿತು. ಈ ಸಂದರ್ಭ ದೇವಸ್ಥಾನದ ಧರ್ಮದರ್ಶಿ ಯಾಜಿ ನಿರಂಜನ ಭಟ್, ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಟ್ರಸ್ಟಿ ನಕ್ರೆ ಬಾಲಕೃಷ್ಣ ರಾವ್, ವಿದ್ಯಾಶಂಕರ್, ವಿನೋದ್ ಸಾಲ್ಯಾನ್ ಬೆಳ್ಳಾಯರು ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!