Sunday, June 7, 2026
Homeತಾಜಾ ಸುದ್ದಿಈದ್ ಗೆ ಸ್ನೇಹಿತನನ್ನು ಊಟಕ್ಕೆ ಕರೆದ ಚಿನ್ನದಂಗಡಿ ಮಾಲೀಕ: ಈದ್ ಬಿರಿಯಾನಿಯೊಂದಿಗೆ ಲಕ್ಷಾಂತರ ರೂಪಾಯಿ...

ಈದ್ ಗೆ ಸ್ನೇಹಿತನನ್ನು ಊಟಕ್ಕೆ ಕರೆದ ಚಿನ್ನದಂಗಡಿ ಮಾಲೀಕ: ಈದ್ ಬಿರಿಯಾನಿಯೊಂದಿಗೆ ಲಕ್ಷಾಂತರ ರೂಪಾಯಿ ಚಿನ್ನವನ್ನೂ ನುಂಗಿದ ಮಿತ್ರ

- Advertisement -
- Advertisement -

ಚೆನ್ನೈ : ಚಿನ್ನಾಭರಣದ ಅಂಗಡಿ ಮಾಲೀಕರೊಬ್ಬರು ಈದ್ ಹಬ್ಬದ ಪ್ರಯುಕ್ತ ತಮ್ಮ ಮನೆಗೆ ಊಟಕ್ಕಾಗಿ ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಮನೆಗೆ ಆಹ್ವಾನಿಸಿದ್ದರು.


ಮೊದಲೇ ಕುಡಿದ ಮತ್ತಿನಲ್ಲಿದ್ದ ಆ ವ್ಯಕ್ತಿ , ಮಾಲೀಕನ ಮನೆಯಲ್ಲಿದ್ದ 1.45 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಬಿರಿಯಾನಿ ಜೊತೆಗೆ ನುಂಗಿದ್ದಾನೆ.


ಈದ್ ಪಾರ್ಟಿ ಮುಗಿದ ಬಳಿಕ ಮನೆಯಲ್ಲಿದ್ದ ವಜ್ರದ ನೆಕ್ಲೇಸ್, ಚಿನ್ನದ ಸರ ಮತ್ತು ವಜ್ರದ ಪೆಂಡೆಂಟ್ ಕಾಣೆಯಾಗಿದ್ದ ಬೆಳಕಿಗೆ ಬಂದಿದೆ. ನಂತರ ಪಾರ್ಟಿಗೆ ಬಂದಿದ್ದ ಮಹಿಳೆಯ ಸ್ನೇಹಿತನೇ ಚಿನ್ನಾಭರಣಗಳನ್ನು ಕದ್ದಿದ್ದಾನೆ ಎಂದು ಶಂಕಿಸಿ ವಿರುಗಂಬಾಕ್ಕಂ ಪೊಲೀಸ್ ಠಾಣೆಗೆ ಮಾಲೀಕರು ದೂರು ನೀಡಿದ್ದಾರೆ.


ತನಿಖೆ ಕೈಗೊಂಡ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದ ನೋಡಿದಾಗ ಹೊಟ್ಟೆಯಲ್ಲಿ ಚಿನ್ನಾಭರಣ ಇರುವುದು ದೃಢಪಟ್ಟಿತ್ತು. ಬಳಿಕ ವೈದ್ಯರು ಆತನಿಗೆ ಎನಿಮಾ ನೀಡಿ ಹೊಟ್ಟೆಯಲ್ಲಿದ್ದ 1 ಲಕ್ಷ 25 ಸಾವಿರ ರೂ. ಬೆಲೆಬಾಳುವ ಸರ ಚಿನ್ನವನ್ನು ಹೊರ ತೆಗಿದಿದ್ದಾರೆ

- Advertisement -

Latest News

error: Content is protected !!