Wednesday, May 15, 2024
Homeತಾಜಾ ಸುದ್ದಿಮೈಸೂರು ಪೊಲೀಸ್ ಇಲಾಖೆಯ ಶ್ವಾನ ಜಸ್ಸಿ ಸಾವು; ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ

ಮೈಸೂರು ಪೊಲೀಸ್ ಇಲಾಖೆಯ ಶ್ವಾನ ಜಸ್ಸಿ ಸಾವು; ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ

spot_img
- Advertisement -
- Advertisement -

ಮೈಸೂರು: ಅಪರಾಧ ಕೃತ್ಯಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರಿಗೆ ಸಹಾಯ ಮಾಡುತ್ತಿದ್ದ ಮೈಸೂರು ನಗರ ಪೊಲೀಸ್ ಘಟಕದ ಶ್ವಾನ ಜಸ್ಸಿ ಮೃತಪಟ್ಟಿದೆ.


ಜರ್ಮನ್ ಶೆಫರ್ಡ್ ತಳಿಯ ಜಸ್ಸಿ ಸೂಕ್ತ ತರಬೇತಿಯೊಂದಿಗೆ ಅಪರಾಧ ಪತ್ತೆ ಕರ್ತವ್ಯಕ್ಕಾಗಿ 2015ರಲ್ಲಿ ಮೈಸೂರು ನಗರ ಪೊಲೀಸ್ ಘಟಕದ ಶ್ವಾನ ದಳಕ್ಕೆ ಸೇರ್ಪಡೆಯಾಗಿತ್ತು. ಈ ಶ್ವಾನ ಹಲವಾರು ಡಾಗ್ ಶೋ, ಮಾಕ್ ಡೀಲ್ (ಅಣುಕು ಕಾರ್ಯಾಚರಣೆ)ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಂಸೆ ಗಳಿಸಿತ್ತು. ಇದರ ತರಬೇತುದಾರ ಭಾಸ್ಕರ್ ಮಾರ್ಗದರ್ಶನದಲ್ಲಿ ಉತ್ತಮ ಅಪರಾಧ ಪತ್ತೆ ಕಾರ್ಯ ಪರಿಶೀಲನೆ ಕರ್ತವ್ಯ ನಿರ್ವಹಿಸಿತ್ತು.


ಇಲಾಖೆಯಲ್ಲಿ ಸುಮಾರು 8 ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿದ್ದ ಜಸ್ಸಿ ಅನಾರೋಗ್ಯದಿಂದ ಸಾವನ್ನಪ್ಪಿದೆ. ಜಸ್ಸಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸಿಎಆರ್ ಉಪ ಪೊಲೀಸ್ ಆಯುಕ್ತ ಶಿವರಾಜು ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೇರವೇರಿಸಲಾಯಿತು. ಶ್ವಾನದಳದ ಉಸ್ತುವಾರಿ ಅಧಿಕಾರಿ ಸುದರ್ಶನ್.ಎನ್. ಅರಕ್ಷಕ ನಿರೀಕ್ಷಕ ಮೂರ್ತಿ. ಕೆ.ಎಂ, ಉಪ ನಿರೀಕ್ಷಕ ಸುರೇಶ್, ಎಆರ್‌ಎಸ್ಐ ರಮೇಶ್ ಹಾಗೂ ಶ್ವಾನ ದಳದ ಇತರೇ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.


ಇದು ಮೈಸೂರು ನಗರ ಶ್ವಾನದಳದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಅವಿನಾಭಾವ ಭಾಂಧವ್ಯ ಹೊಂದಿದ್ದು, ಎಲ್ಲರ ನೆಚ್ಚಿನ ಶ್ವಾನವಾಗಿತ್ತು. ಇದರ ಸಾವಿಗೆ ಶ್ವಾನದಳದ ಅಧಿಕಾರಿ ಮತ್ತು ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.

- Advertisement -
spot_img

Latest News

error: Content is protected !!