Sunday, June 7, 2026
Homeಕರಾವಳಿಉಡುಪಿ: ಮಸೀದಿಗೆ ಹೋಗುತ್ತಿದ್ದ ಯುವಕನ ಅಪಹರಣ

ಉಡುಪಿ: ಮಸೀದಿಗೆ ಹೋಗುತ್ತಿದ್ದ ಯುವಕನ ಅಪಹರಣ

- Advertisement -
- Advertisement -

ಉಡುಪಿ: ಮಸೀದಿಗೆ ತೆರಳುತ್ತಿದ್ದ ಯುವಕನನ್ನು  ತಂಡವೊಂದು ಅಪಹರಿಸಿರುವ ಘಟನೆ ಶಿರ್ವ ಪಣಿಯೂರು -ಬೆಳಪು ಮಾರ್ಗದ ಮಧ್ಯೆ ನಡೆದಿದೆ.

ಬೈಕಿನಲ್ಲಿ ಮನೆಯಿಂದ ಬೆಳಪು ಮಸೀದಿಗೆ ಹೋಗುತ್ತಿದ್ದ ಅಬ್ದುಲ್ ಖಾದರ್ ಎಂಬವರ ಮಗ ನೌಫಿಲ್(19) ಎಂಬಾತನನ್ನು ತಂಡವೊಂದು ಕಾರಿನಲ್ಲಿ ಬಲವಂತವಾಗಿ ಕುಳ್ಳಿರಿಸಿ ಅಪಹರಿಸಿದೆ.

ಕಾರಿನಲ್ಲಿ ಬಂದ ದಾವೂದು ಇಬ್ರಾಹಿಂ ಸೇರಿದಂತೆ ನಾಲ್ಕು ಮಂದಿ ತಂಡ ಅಪಹರಿಸಿಕೊಂಡು ಹೋಗಿರುವುದಾಗಿ ಆರೋಪಿಸಲಾಗಿದೆ.

ಘಟನೆ ಜು.8ರಂದು ಮಧ್ಯಾಹ್ನ 1 ಗಂಟೆಯ ವೇಳೆ ನಡೆದಿದ್ದು ಬೆಳಕಿಗೆ ಬಂದಿದೆ.ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!