Saturday, May 18, 2024
HomeUncategorizedತಾಲೂಕಿಗೆ ಮಿನಿ ವಿಮಾನ ನಿಲ್ದಾಣದ ಚಿಂತನೆ; ಎರಡು ತಿಂಗಳಿನಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಶಿಲಾನ್ಯಾಸ; ಹರೀಶ್...

ತಾಲೂಕಿಗೆ ಮಿನಿ ವಿಮಾನ ನಿಲ್ದಾಣದ ಚಿಂತನೆ; ಎರಡು ತಿಂಗಳಿನಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಶಿಲಾನ್ಯಾಸ; ಹರೀಶ್ ಪೂಂಜ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನಲ್ಲಿ ಸಮರ್ಪಕವಾದ ಬಸ್ ನಿಲ್ಧಾಣದ ಅವಶ್ಯಕತೆಯಿದೆ. ಇನ್ನು ಎರಡು ತಿಂಗಳಿನಲ್ಲಿ ತಾಲೂಕಿಗೆ ಸುಸಜ್ಜಿತವಾದ ಬಸ್ ನಿಲ್ದಾಣದ ಯೋಜನೆಯನ್ನು ಕೈಗೊಂಡಿದ್ದು, ಸಾರಿಗೆ ಸಚಿವರ ಮೂಲಕ ಬಸ್ ನಿಲ್ದಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಈ ವೇಳೆಯಲ್ಲಿ ಮಿನಿ ವಿಮಾನ ನಿಲ್ಧಾಣದ ಚಿಂತನೆಗಳ ಕುರಿತು ಮಾತನಾಡಿದರು.

ಅವರು ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ಜುಲೈ 09 ರಂದು ಜರುಗಿದ ಪ್ರಧಾನಿ ಮೋದಿಯವರ ಕೇಂದ್ರ ಸರ್ಕಾರ 8 ವರ್ಷಗಳ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ
ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಾಲೂಕಿನ ಅಭಿವೃದ್ದಿಯ ನಿಟ್ಟಿನಲ್ಲಿ ಮಿನಿ ವಿಮಾನ ನಿಲ್ದಾಣದ ಅವಶ್ಯಕತೆಯಿದ್ದು, ಈಗಾಗಲೇ ಈ ಕುರಿತು ದೆಹಲಿಯಲ್ಲಿ ಸಂಸದರ ಮೂಲಕ ಮಾತುಕತೆ ನಡೆಸಲಾಗಿದೆ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರ ಸಾಧನೆ ಹಾಗೂ ಸಮಾಜ ಮುಖಿ ಕಾರ್ಯಗಳನ್ನು ಗುರುತಿಸಿ ಅವರನ್ನು ರಾಜ್ಯ ಸಭೆ ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಬೆಳ್ತಂಗಡಿಗೆ ವಿಶೇಷ ಗೌರವ ಸ್ಥಾನ ಮಾನ ಸಿಕ್ಕಿದೆ. ಇನ್ನು ಕಳೆದ 70 ವರ್ಷಗಳಲ್ಲಿ ಆಗದಂತಹ ಅಭಿವೃದ್ಧಿಗಳು ಕೇವಲ ನಾಲ್ಕು ವರುಷಗಳಲ್ಲಿ ಆಗಿದೆ. ತಾಲೂಕಿನಲ್ಲಿ 1800 ಕೋಟಿ ಅನುದಾನಗಳ ಮೂಲಕ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಧರ್ಮಸ್ಥಳ ಕ್ಷೇತ್ರದ ಮಂಜುನಾಥ ಸ್ವಾಮಿಯ ಆಶೀರ್ವಾದದಿಂದ ನಮ್ಮ ಬೇಡಿಕೆಗಳು ಎಲ್ಲವೂ ಈಡೇರುತ್ತಿದೆ ಎಂದರು.

ತಾಲೂಕಿನ ಪುಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ನಾಡಿನೆಲ್ಲೆಡೆಯಿಂದ ಬರುವಂತಹ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ತಾಲೂಕಿನ ಕೇಂದ್ರ ಭಾಗದಲ್ಲಿ ಬಸ್ ತಂಗುದಾಣವಾದಲ್ಲಿ ತಾಲೂಕಿಗೆ ರಾಜ್ಯದ ವಿವಿಧ ಭಾಗಗಳಿಂದ ಬಸ್ಸುಗಳು ಬರುವಂತಾಗಿ ನಮ್ಮ ಜನರಿಗೂ ಅನುಕೂಲವಾಗಲಿದೆ ಎಂದರು.

ನಾನು ಗ್ರಾಮೀಣ ಭಾಗದ ಸಾಮಾನ್ಯ ಕೃಷಿಕನ ಮಗನಾಗಿದ್ದು, ಚುನಾವಣೆಗೆ ನಿಂತ ಸಂದರ್ಭದಲ್ಲಿ ಈ ಯುವಕ ಯಾವ ರೀತಿ ತಾಲೂಕನ್ನು ಮುನ್ನಡೆಸಬಹುದು ಎಂಬ ಆತಂಕ ಕೆಲವರಿಗೆಲ್ಲ ಇದದ್ದು ಸಹಜ. ಆದರೆ ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿಯ ಮೂಲಕ ನವ ಬೆಳ್ತಂಗಡಿ ನಿರ್ಮಾಣದ ಸಂಕಲ್ಪದ ಭರವಸೆಯನ್ನು ನೀಡಿದ್ದು, ಆ ಭರವಸೆಯಂತೆ ಕಳೆದ ನಾಲ್ಕು, ವರುಷಗಳಲ್ಲಿ ಅಭಿವೃದ್ಧಿ ಮೂಲಕ ಕಾರ್ಯಗಳನ್ನು ಕಾರ್ಯಗತ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಲು ಹಮ್ಮೆಯಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಮ್ಮ ಪ್ರಾಮಾಣಿಕ, ಚೈತನ್ಯ ಶೀಲ ವ್ಯಕ್ತಿತ್ವದ ಮೂಲಕ ತಾಲೂಕಿನ ಜನರ ಭರವಸೆ ಈಡೇರಿಸುವ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಯವರು ಭಾರತ ದೇಶವನ್ನು ತಮ್ಮ ಆಡಳಿತದ ಮೂಲಕ ಜಗತ್ತು ಗುರುತಿಸುವಂತೆ ಮಾಡಿದ್ದಾರೆ ಹಾಗೂ ಅವರ ಸಾಧನೆಗಳು ದೇಶದ ಕೀರ್ತಿಯನ್ನು ಹೆಚ್ಚಿಸಿವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮಾತನಾಡಿ, ಪ್ರಧಾನಿ ಮೋದಿ ಯವರ ಸರಕಾರ 8ವರ್ಷಗಳ ದಕ್ಷ ಆಡಳಿತ ಪೂರೈಸಿದೆ. ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿ 8 ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ತಾಲೂಕಿನ ನಾನಾ ಸಾಧಕರನ್ನು ಗೌರವಿಸುವ ಕೆಲಸದ ಜೊತೆಗೆ ಸವಲತ್ತು ವಿತರಣೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ,ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ಜಿಲ್ಲಾ ಅಧ್ಯಕ್ಷ ಆರ್.ಸಿ ನಾರಾಯಣ್, ಬಿಜೆಪಿ ಎಸ್.ಟಿ. ಮೋರ್ಚಾದ ಜಿಲ್ಲಾ ಅಧ್ಯಕ್ಷ ಚನ್ನಕೇಶವ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಹಿರಿಯ ಮುಖಂಡ ಕುಶಾಲಪ್ಪ ಗೌಡ, ಪದಾಧಿಕಾರಿ ಧನಲಕ್ಷ್ಮಿ ಜನಾರ್ಧನ್, ಶ್ರೀನಿವಾಸ್ ರಾವ್, ಕಾರ್ಯದರ್ಶಿ ಪ್ರಶಾಂತ್, ಉಪಾಧ್ಯಕ್ಷ ಸೀತಾರಾಮ ಬೆಳಾಲು, ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾರು 411 ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ರಾಜೇಶ್ ಪಂರ್ಬುಡ ನಿರೂಪಿಸಿದರು. ಅಳದಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಸ್ವಾಗತಿಸಿ, ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು ಧನ್ಯವಾದ ಸಮರ್ಪಿಸಿದರು.

- Advertisement -
spot_img

Latest News

error: Content is protected !!