Monday, June 8, 2026
Homeತಾಜಾ ಸುದ್ದಿವಿಗ್ ಹಾಕಿ ಮದ್ವೆಯಾದ ಬೋಳು ತಲೆಯ ಯುವಕ, ಮೊದಲ ರಾತ್ರಿಯಲ್ಲಿ ಶಾಕ್ ಆಗಿ ಪೊಲೀಸ್ ಠಾಣೆ...

ವಿಗ್ ಹಾಕಿ ಮದ್ವೆಯಾದ ಬೋಳು ತಲೆಯ ಯುವಕ, ಮೊದಲ ರಾತ್ರಿಯಲ್ಲಿ ಶಾಕ್ ಆಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನೂತನ ವಧು

- Advertisement -
- Advertisement -

ಮುಂಬೈ: ವಧು ಪರೀಕ್ಷೆ, ಮದುವೆ, ಹೀಗೆ ಎಲ್ಲಾ ರೀತಿಯ ಸಂಪ್ರದಾಯಕ್ಕೆ ವಿಗ್ ಧರಿಸಿ ಪಾಲ್ಗೊಂಡು ಹಾಗೂ ತನ್ನ ಬೋಳು ತಲೆಯ ಬಗ್ಗೆ ಪತ್ನಿಯ ಜೊತೆ ಮುಚ್ಚಿಟ್ಟಿದ್ದ ಗಂಡನ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.

ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವತಿ ಹಾಗೂ ಮುಂಬೈನ ಮೀರಾರೋಡ್ ನಿವಾಸಿಯಾಗಿದ್ದ 29 ವರ್ಷದ ಯುವಕನೊಂದಿಗೆ ಮದುವೆ ನಡೆಸಲು ಎರಡು ಮನೆಯ ಕುಟುಂಬದವರು ತೀರ್ಮಾನಿಸಿದ್ದರು. ಆದರೆ ಮದುವೆಯಾಗುವ ಯುವಕ ತನಗೆ ಬೋಳು ತಲೆ ಇದೆ ಎಂಬುದನ್ನು ಮರೆಮಾಚಿ ಮದುವೆಯಾಗಿದ್ದ.

ಇದನ್ನು ತನ್ನ ಮೊದಲ ರಾತ್ರಿಯಂದು ಗಂಡನ ಬೋಳು ತಲೆಯ ಬಗ್ಗೆ ತಿಳಿದ ಯುವತಿ, ಈ ಕುರಿತು ಗಂಡ ಹಾಗೂ ಅವರ ಕುಟುಂಬಸ್ಥರನ್ನು ಪ್ರಶ್ನೆ ಮಾಡಿದ್ದಳು. ಇದಕ್ಕೆ ಉತ್ತರಿಸಿದ್ದ ಅವರು ‘ಇಂದಿನ ಕಾಲದಲ್ಲಿ ಇದು ಸಾಮಾನ್ಯ ಸಂಗತಿ’ ಎಂದು ಹೇಳಿ ಸುಮ್ಮನಾಗಿದ್ದರು.

ತನ್ನ ಭವಿಷ್ಯದ ಕನಸಗಳೊಂದಿಗೆ ಮದುವೆಯಾಗಿದ್ದ ಯುವತಿಗೆ ಇದು ಶಾಕ್ ನೀಡಿತ್ತು. ತನಗೆ ಸುಳ್ಳು ಹೇಳಿ ಮದುವೆಯಾದ ಪತಿಯ ವಿರುದ್ಧ ಸದ್ಯ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನಯಾ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

- Advertisement -

Latest News

error: Content is protected !!