Tuesday, June 9, 2026
Homeತಾಜಾ ಸುದ್ದಿತಪ್ಪಿಸಿಕೊಳ್ಳಲು ಯತ್ನಿಸಿದ ಖದೀಮರ ಮೇಲೆ ಪೊಲೀಸ್ ಫೈರಿಂಗ್: ನಾಲ್ವರು ಕೊಲೆ ಆರೋಪಿಗಳು ಅಂದರ್

ತಪ್ಪಿಸಿಕೊಳ್ಳಲು ಯತ್ನಿಸಿದ ಖದೀಮರ ಮೇಲೆ ಪೊಲೀಸ್ ಫೈರಿಂಗ್: ನಾಲ್ವರು ಕೊಲೆ ಆರೋಪಿಗಳು ಅಂದರ್

- Advertisement -
- Advertisement -

ಅವಡದೇವನಹಳ್ಳಿ: ಕಳೆದ ಮೂರು ದಿನಗಳ ಹಿಂದೆ ವಿನೀತ್ ಎಂಬಾತನ ಕೊಲೆ ನಡೆದಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್ ಠಾಣೆ ಪೊಲೀಸರು ಇಂದು ನಾಲ್ವರು ಕೊಲೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಫೈರಿಂಗ್ ನಡೆಸಿ ಬಂಧಿಸಿದ್ದಾರೆ. ಅವಡದೇವನಹಳ್ಳಿಯಲ್ಲಿ ದಾಳಿ ನಡೆಸಿದ್ದು ಈ ವೇಳೆ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಇಬ್ಬರು ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಆರೋಪಿಗಳ ಕಾಲಿಗೆ ಆನೇಕಲ್ ಡಿವೈಎಸ್ಪಿ ಮಹದೇವ್ ಹಾಗೂ ಇನ್ಸ್ ಪೆಕ್ಟರ್ ಕೃಷ್ಣ ಫೈರಿಂಗ್ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಮುತ್ಯಾನಲ್ಲೂರಿನಲ್ಲಿ ಕೂಡ ಇಬ್ಬರು ಕೊಲೆ ಆರೋಪಿಗಳ ಮೇಲೆ ಫೈರಿಂಗ್ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗೋಪಿ, ಗಂಗಾ, ಅನಂತ, ಬಸವ ಎಂದು ಗುರುತಿಸಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!