Tuesday, May 14, 2024
Homeಕರಾವಳಿಗ್ರಾಮ ಪಂಚಾಯತ್ ಚುನಾವಣೆ ಪಕ್ಷದ ಕಾರ್ಯಕರ್ತರ ಶಕ್ತಿಯ ಪ್ರದರ್ಶನಕ್ಕೆ ಅಡಿಪಾಯ:ರಾಜೇಶ್ ನಾಯ್ಕ್

ಗ್ರಾಮ ಪಂಚಾಯತ್ ಚುನಾವಣೆ ಪಕ್ಷದ ಕಾರ್ಯಕರ್ತರ ಶಕ್ತಿಯ ಪ್ರದರ್ಶನಕ್ಕೆ ಅಡಿಪಾಯ:ರಾಜೇಶ್ ನಾಯ್ಕ್

spot_img
- Advertisement -
- Advertisement -

ಬಂಟ್ವಾಳ: ದೇಶದ ಅಭಿವೃದ್ಧಿಯ ಚಿಂತನೆಯ ವಿಚಾರದಲ್ಲಿ ನಾವು ನೀಡಿದ ಮತದಾನ ದಿಂದಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಾಗಲು ಸಾಧ್ಯವಾಯಿತು. ಪಕ್ಷದ ಹಿರಿಯ ನಾಯಕರ ಹೋರಾಟದ ಫಲವಾಗಿ ಜೊತೆಗೆ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕಾಶ್ಮೀರ 370 ಆರ್ಟಿಕಲ್ ರದ್ದು ಅಲ್ಲದೆ ಅನೇಕ ಬದಲಾವಣೆ ಗಳಿಗೆ ಸಾಧ್ಯವಾಯಿತು ಎಂದು ಬಂಟ್ವಾಳ ಶಾಸಕ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್ ಹೇಳಿದರು.

ಅವರು ಗೋಳ್ತಮಜಲು ಮಹಾಶಕ್ತಿಕೇಂದ್ರದ ಬರಿಮಾರು ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಕುಟುಂಬ ಮಿಲನ ಹಾಗೂ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬರಿಮಾರು ಗ್ರಾಮದಲ್ಲಿ 1.7 ಕೋಟಿ ವೆಚ್ಚದಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ನಡೆಸಿ ಮಾತನಾಡಿದರು.ರಾಜಕೀಯ ಎಂಬ ಕುಟುಂಬದಲ್ಲಿ ಪಕ್ಷದ ಕಾರ್ಯಕರ್ತರು ಜೊತೆಯಾಗಿ ಮುಂದಿನ ಚುನಾವಣೆಯನ್ನು ಎದುರಿಸಿ ಬಹುಮತ ಸಾಧಿಸಲು ಶ್ರಮಿಸಬೇಕು ಎಂದು ಅವರು ಹೇಳಿದರು.ಗ್ರಾಮ ಪಂಚಾಯತ್ ಚುನಾವಣೆ ಪಕ್ಷದ ಕಾರ್ಯಕರ್ತರ ಶಕ್ತಿಯ ಪ್ರದರ್ಶನಕ್ಕೆ ಅಡಿಪಾಯ ವಾಗಿದೆ.

ಗ್ರಾ.ಪಂ.ಚುನಾವಣೆಯನ್ನು ಪ್ರತಿಷ್ಠೆಯ ವಿಚಾರದಲ್ಲಿ ಎದುರಿಸಿ ಮುಂದಿನ ಗ್ರಾ.ಪಂ.ಚುನಾವಣೆಯಲ್ಲಿ ಬರಿಮಾರು ಗ್ರಾಮಪಂಚಾಯತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ರೀತಿಯಲ್ಲಿ ಒಟ್ಟಾಗಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಗ್ರಾಮಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಬಹಳ ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿ.ಪಂಸದಸ್ಯೆ ಕಮಲಾಕ್ಷಿ ಪೂಜಾರಿ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರನ್ನು ಶಾಸಕರು ಗೌರವಿಸಿದರು.
ಆರಂಭದಲ್ಲಿ ಕಾರ್ಯಕರ್ತರು ಬಿಜೆಪಿ ಧ್ವಜ ಹಾಗೂ ಬಾವುಟ ಹೊತ್ತ ವಾಹನ ಜಾಥದ ಮೂಲಕ ಶಾಸಕರನ್ನು ಸ್ವಾಗತಿಸಿದರು.ಕಾರ್ಯಕ್ರಮದುದ್ದಕ್ಕೂ ವಾಹನ ಜಾಥ ಮೆರಗು ನೀಡಿತ್ತು.

ಕಾಮಗಾರಿ ಗಳ ವಿವರ:

5 ಲಕ್ಷ ವೆಚ್ಚದಲ್ಲಿ ಕಾಗೆಕಾನ ರಸ್ತೆ ಮರುಡಾಮರೀಕರಣ
25 ಲಕ್ಷ ವೆಚ್ಚದಲ್ಲಿ ಕೇವೆ ತೋಡಬರಿ ರಸ್ತೆ
10 ಲಕ್ಷ ವೆಚ್ಚದಲ್ಲಿ ಗಾಣದಪಾಲು ಮಹಾಕಾಳಿ ಬೆಟ್ಟು ರಸ್ತೆ
1.75 ಲಕ್ಷ ವೆಚ್ಚದಲ್ಲಿ ಗುಂಡ್ಯಡ್ಕ ನೆಕ್ಕಿದ ಬಲ್ಲೆ ರಸ್ತೆ
5 ಲಕ್ಷ ತುಂಗರೆಕೋಡಿ ದೇಲಬೆಟ್ಟು ರಸ್ತೆ
5 ಲಕ್ಷ ವೆಚ್ಚದಲ್ಲಿ ಕಡವಿನ ಬಳಿ ಕಾಗೆಕಾನ ರಸ್ತೆ
15 ಲಕ್ಷ ವೆಚ್ಚದಲ್ಲಿ ಕಾಗೆಕಾನ ಮುಳಿಬೈಲು ರಸ್ತೆ
10 ಲಕ್ಷ ವೆಚ್ಚದಲ್ಲಿ ಕೇವೆ ರಸ್ತೆ ಅಭಿವೃದ್ಧಿ
10 ಲಕ್ಷ ವೆಚ್ಚದಲ್ಲಿ ಕೆಳಗಿನ ಕಡವಿನ ಬಳಿ ರಸ್ತೆ

- Advertisement -
spot_img

Latest News

error: Content is protected !!