Friday, October 23, 2026
Homeಕರಾವಳಿಎಂಆರ್‌ಪಿಎಲ್ ಬಫರ್ ವಲಯಕ್ಕೆ ಶಾಂತಿ ಗುಡ್ಡೆ ಸೇರಿಸಲು ಆಗ್ರಹ

ಎಂಆರ್‌ಪಿಎಲ್ ಬಫರ್ ವಲಯಕ್ಕೆ ಶಾಂತಿ ಗುಡ್ಡೆ ಸೇರಿಸಲು ಆಗ್ರಹ

- Advertisement -
- Advertisement -

ಮಂಗಳೂರು: ಎಂಆರ್‌ಪಿಎಲ್ ಸುತ್ತಮುತ್ತಲಿನ ಪ್ರಸ್ತಾವಿತ ಬಫರ್ ವಲಯಕ್ಕೆ ಶಾಂತಿ ಗುಡ್ಡೆ ವಸತಿ ಪ್ರದೇಶವನ್ನು ಸೇರಿಸಬೇಕು ಎಂದು ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

ಶಾಂತಿ ಗುಡ್ಡೆಯ ಸುಮಾರು 4 ಎಕರೆ ಪ್ರದೇಶದಲ್ಲಿ 105 ಕುಟುಂಬಗಳು ವಾಸಿಸುತ್ತಿದ್ದು, ಕೈಗಾರಿಕಾ ಮಾಲಿನ್ಯದಿಂದ ಆರೋಗ್ಯ ಸಮಸ್ಯೆಗಳ ಆತಂಕ ಎದುರಿಸುತ್ತಿದ್ದಾರೆ ಎಂದು ವೇದಿಕೆ ಆರೋಪಿಸಿದೆ. ಸುಮಾರು 20 ವರ್ಷಗಳಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ತಿಳಿಸಿದೆ.

ಪ್ರಸ್ತುತ 27 ಎಕರೆ ಬಫರ್ ವಲಯಕ್ಕೆ ಶಾಂತಿ ಗುಡ್ಡೆಯ 4 ಎಕರೆ ಪ್ರದೇಶವನ್ನೂ ಸೇರಿಸಿ, ಒಟ್ಟು 31 ಎಕರೆಗೆ ವಿಸ್ತರಿಸಬೇಕು ಎಂದು ವೇದಿಕೆ ಒತ್ತಾಯಿಸಿದೆ.

2007ರಲ್ಲೇ ಈ ಕುರಿತು ನೋಟಿಸ್ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ವೇದಿಕೆ, ಜಿಲ್ಲಾಡಳಿತ ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದೆ. ಇಲ್ಲದಿದ್ದರೆ ಬೃಹತ್ ಅಹಿಂಸಾತ್ಮಕ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

- Advertisement -

Latest News

error: Content is protected !!